Breaking News

ಜುಲೈ ಅಂತ್ಯದೊಳಗೆ 15,000 ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟ – ಸಚಿವ ಬಿ.ಸಿ ನಾಗೇಶ್

Spread the love

ಬೆಂಗಳೂರು: 15,000 ಶಾಲಾ ಶಿಕ್ಷಕರ ನೇಮಕಾತಿ ( Teacher Recruitment 2022 ) ಸಂಬಂಧ ನಡೆದಂತ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಜುಲೈ ಅಂತ್ಯದೊಳಗೆ ಪ್ರಕಟಿಸಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

 

 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 15 ಸಾವಿರ ಶಿಕ್ಷಕರ ಪರೀಕ್ಷೆಯ ನಂತ್ರ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದೆ. ಎರಡು ಪತ್ರಿಕೆಯ ಮೌಲ್ಯಮಾಪನ ಮುಗಿದಿದ್ದು, ಜುಲೈ ಕೊನೆಯ ವಾರ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ಶೇಕಡಾವಾರು ಅಂಕಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ಜುಲೈ ಅಂತ್ಯದ ವೇಳೆಗೆ ಪ್ರಕಟಿಸಲಾಗುತ್ತದೆ ಎಂದರು.

 

ಅಂದಹಾಗೇ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೇ.21 ಮತ್ತು 22ರಂದು ನಡೆದಿತ್ತು. ಈ ಹುದ್ದಗಳಿಗೆ 10,6,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ