Breaking News
Home / ರಾಜಕೀಯ / ಗದಗ: ಜಿಲ್ಲೆಯ ಮುಂಡರಗಿ ಪುರಸಭೆಯಲ್ಲಿ ಶಾಸಕರ ನಕಲಿ ಸಹಿ ವಿವಾದ ಜಟಾಪಟಿ ಜೋರಾಗಿದೆ

ಗದಗ: ಜಿಲ್ಲೆಯ ಮುಂಡರಗಿ ಪುರಸಭೆಯಲ್ಲಿ ಶಾಸಕರ ನಕಲಿ ಸಹಿ ವಿವಾದ ಜಟಾಪಟಿ ಜೋರಾಗಿದೆ

Spread the love

ಗದಗ: ಆ ಕ್ಷೇತ್ರದ ಶಾಸಕರ ಲೆಟರ್ ಹೆಡ್ ಯಾರು ಬೇಕಾದ್ರೂ, ಹೇಗೆ ಬೇಕಾದ್ರೂ ಉಪಯೋಗಿಸಿಕೊಳ್ಳಬಹುದಂತೆ.

ಸರ್ಕಾರದ ಇಲಾಖೆಗಳಿಗೆ ಶಾಸಕರ ನಕಲಿ ಸಹಿ ಮಾಡಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಅನ್ನೋ ಗಂಭೀರ ಆರೋಪ ಕಾಂಗ್ರೆಸ್ ಸದಸ್ಯರು ಮಾಡಿದ್ದಾರೆ. ಎಸ್.ಎಫ್.ಸಿ ಅನುದಾನದ ಕ್ರಿಯಾ ಯೋಜನೆ ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಬರೆದ ಶಾಸಕರ ಪತ್ರಕ್ಕೆ ನಕಲಿ ಸಹಿ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಆದ್ರೆ, ಲೆಟರ್ ಹೆಡ್ಗಳಲ್ಲಿ ಶಾಸಕರ ಡಿಫರೆಂಟ್ ಡಿಫರೆಂಟ್ ಸಹಿಗಳು ಆರೋಪಕ್ಕೆ ಪುಷ್ಠಿ ನೀಡ್ತಾಯಿದೆ. ಈ ಬಗ್ಗೆ ಶಾಸಕರು ಐಜಿ ಗಮನಕ್ಕೆ ತಂದಿದ್ದಾರಂತೆ. ಅಷ್ಟಕ್ಕೂ ನಕಲಿ ಸಹಿ ಮಾಡಿದ್ದಾದ್ರೂ ಯಾರೂ ಅನ್ನೋದೇ ನಿಗೂಢವಾಗಿದೆ.

ಗದಗ ಜಿಲ್ಲೆಯ ಮುಂಡರಗಿ ಪುರಸಭೆಯಲ್ಲಿ ಶಾಸಕರ ನಕಲಿ ಸಹಿ ವಿವಾದ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಸದಸ್ಯರು, ಪಟ್ಟಣ ಪಂಚಾಯತ್ ಅಧ್ಯಕ್ಷೆ ವಿರುದ್ಧ ಶಾಸಕರ ನಕಲಿ ಸಹಿ ಆರೋಪ ಪ್ರತ್ಯಾರೋಪ ನಡೆದಿದೆ. ಕಾಂಗ್ರೆಸ್ ಸದಸ್ಯನ ವಿರುದ್ಧ ಪುರಸಭೆ ಅಧ್ಯಕ್ಷೆ ಫುಲ್ ಗರಂ ಆಗಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಲೆಟರ್ ಹೆಡ್ ಗಳು ಕ್ಷೇತ್ರದಲ್ಲಿ ಬಿಕರಿಯಾಗಿವೆ ಅಂತ ಕಾಂಗ್ರೆಸ್ ಸದಸ್ಯರು ತೀವ್ರ ವಾಗ್ದಾಳಿ ಮಾಡಿದ್ದಾರೆ. 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ