Breaking News
Home / ರಾಜಕೀಯ / ಹುಬ್ಬಳ್ಳಿ: ಬಾಡಿಗೆ ಜಾಗದಲ್ಲಿ ವಾಸ ಮಾಡಿ, ಅಲ್ಲಿಯೇ ಗುಡಿ ಕಟ್ಟಿದ ಇನ್‌ಸ್ಪೆಕ್ಟರ್‌

ಹುಬ್ಬಳ್ಳಿ: ಬಾಡಿಗೆ ಜಾಗದಲ್ಲಿ ವಾಸ ಮಾಡಿ, ಅಲ್ಲಿಯೇ ಗುಡಿ ಕಟ್ಟಿದ ಇನ್‌ಸ್ಪೆಕ್ಟರ್‌

Spread the love

ಹುಬ್ಬಳ್ಳಿ: ಸ್ವಂತ ಜಾಗದಲ್ಲಿಯೂ ಸ್ಥಳೀಯ ಆಡಳಿತದಿಂದ ಅನುಮತಿಯಿಲ್ಲದೆ ಚಿಕ್ಕ ಕಟ್ಟಡ ನಿರ್ಮಿಸಲು ಸಹ ಅವಕಾಶವಿಲ್ಲ. ಬಾಡಿಗೆ ಜಾಗದಲ್ಲಿ ವಾಸ ಮಾಡಿ, ಅಲ್ಲಿಯೇ ಒಂದು ಗುಡಿ ಕಟ್ಟುತ್ತಾರೆ ಅಂದರೆ? ಅದರಲ್ಲೂ, ಕಾನೂನು ಪಾಲನೆ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಗುಡಿಯನ್ನು ಅಕ್ರಮವಾಗಿ ನಿರ್ಮಿಸುತ್ತಾರೆಂದರೆ..!

 

ಇಂತಹದ್ದೊಂದು ಕಾನೂನು ಬಾಹಿರ ಕೃತ್ಯ ಗೋಕುಲ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಅವರಿಂದ ನಡೆದಿದೆ. ಕಳೆದ ನಲವತ್ತು ವರ್ಷಗಳಿಂದ ಗೋಕುಲ ಪೊಲೀಸ್ ಠಾಣೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಇಲಾಖೆಗೆ ಕಟ್ಟಡದ ಒಂದು ಭಾಗವನ್ನವಷ್ಟೇ ನೀಡಲಾಗಿದೆ. ಆದರೆ, ಇನ್‌ಸ್ಪೆಕ್ಟರ್ ಕಟ್ಟಡದ ಆವರಣವನ್ನೇ ಅತಿಕ್ರಮಿಸಿ ಅಂದಾಜು ₹3 ಲಕ್ಷ ವೆಚ್ಚದಲ್ಲಿ, ಆರು ಅಡಿ ಅಗಲ, 16 ಅಡಿ ಎತ್ತರದ ಗುಡಿಯೊಂದನ್ನು ಕಟ್ಟಿದ್ದಾರೆ. ಇದೀಗ ವಿವಾದಕ್ಕೆ ಈಡಾಗಿದೆ.

ಆರು ತಿಂಗಳ ಹಿಂದೆಯೇ ಗುಡಿ ಕಾಮಗಾರಿ ನಡೆಸಿ, ಪ್ಲಾಸ್ಟರ್ ಸಹ ಪೂರ್ಣಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಬಣ್ಣ ಬಳಿದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉದ್ಘಾಟನೆಯಾಗಿರುತ್ತಿತ್ತು. ಆದರೆ, ಕ್ಯೂರಿಂಗ್(ಕಟ್ಟಡಕ್ಕೆ ನೀರುಣಿಸುವ ಪ್ರಕ್ರಿಯೆ) ಸಂಬಂಧಿಸಿದಂತೆ ಸಣ್ಣ ಕೈಗಾರಿಕಾ ಇಲಾಖೆ ಸಿಬ್ಬಂದಿ ಮತ್ತು ಇನ್‌ಸ್ಪೆಕ್ಟರ್ ನಡುವೆ ನಡೆದ ವಾಗ್ವಾದ ಅಕ್ರಮ ಕಟ್ಟಡ ಕಾಮಗಾರಿ ಬಹಿರಂಗವಾಗುವಂತೆ ಮಾಡಿದೆ.

ಸಣ್ಣ ಕೈಗಾರಿಕೆ ಇಲಾಖೆ ಸಿಬ್ಬಂದಿ ಸಂಜೆ ಕರ್ತವ್ಯ ಮುಗಿಸಿ ತೆರಳುವಾಗ, ನೀರಿನ ವಾಲ್ ಬಂದ್ ಮಾಡಿ ಹೋಗುತ್ತಾರೆ. ಇದರಿಂದ ಸಂಜೆ ವೇಳೆ ಕಟ್ಟಡದ ಯಾವ ಭಾಗಕ್ಕೂ ನೀರು ಲಭ್ಯವಾಗುವುದಿಲ್ಲ. ಗುಡಿಯ ಪ್ಲಾಸ್ಟರ್‌ಗೆ ನೀರುಣಿಸಲು ಇನ್‌ಸ್ಪೆಕ್ಟರ್ ಕಾಲಿಮಿರ್ಚಿ ಅವರು ಮೇಲ್ಮಹಡಿಯ ಕೈಗಾರಿಕಾ ಇಲಾಖೆ ಸಿಬ್ಬಂದಿಯಲ್ಲಿ ಹೋಗಿ, ವಾಲ್ ಬಂದ್ ಮಾಡುತ್ತಿರುವ ಕುರಿತು ತುಸು ಏರು ದನಿಯಲ್ಲಿ ಮಾತನಾಡಿದ್ದಾರೆ. ಆಗ ಅಲ್ಲಿಯ ಸಿಬ್ಬಂದಿ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಕೈಗಾರಿಕಾ ಇಲಾಖೆ ಸಹಾಯಕ ವ್ಯವಸ್ಥಾಪಕರು ‘ನಮ್ಮ ಇಲಾಖೆ ಜಾಗದಲ್ಲಿ ಅನುಮತಿಯಿಲ್ಲದೆ ಗುಡಿ ಕಟ್ಟಲಾಗಿದೆ’ ಎಂದು ಬೆಂಗಳೂರಿನ ಪ್ರಧಾನ ಕಚೇರಿಗೆ ಪತ್ರ ಬರೆದು ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅಲ್ಲಿಂದ‌ ಇನ್‌ಸ್ಪೆಕ್ಟರ್ ಅವರಿಗೆ ‘ಕಟ್ಟಡ ಕಾಮಗಾರಿ ಮುಂದುವರಿಸದೆ, ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು’ ಎಂದು ಸೂಚಿಸಲಾಗಿದೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ