Breaking News
Home / ರಾಜಕೀಯ / ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

Spread the love

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ಯೋಜನೆ (Rural Development and Panchayat Raj )ಅಡಿ ಮಹಾತ್ಮಗಾಂಧಿ ನರೇಗಾ (NAREGA) ಯೋಜನೆಯ ವಿವಿಧ ಕಾರ್ಯಗಳ ಅನುಷ್ಠಾನದ ನಡೆಸಲು ವಿವಿಧ ರಾಜ್ಯ ಗುಣಮಟ್ಟದ ಮಾನಿಟರ್ ಖಾಲಿ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 2 ಕಡೆಯ ದಿನಾಂಕ ಆಗಿದೆ.

ಸಂಸ್ಥೆಯ ಹೆಸರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕರ್ನಾಟಕ (RDPR)
ಹುದ್ದೆಯ ಹೆಸರು: ಸ್ಟೇಟ್ ಕ್ವಾಲಿಟಿ ಮಾನಿಟರ್
ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
ಉದ್ಯೋಗ ಸ್ಥಳ: ಬೆಂಗಳೂರು
ಸಂಬಳ: ಗ್ರಾಮೀಣಾಭಿವೃದ್ಧಿ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ

ಹುದ್ದೆ ವಿದ್ಯಾರ್ಹತೆ ವಯೋಮಿತಿ
ರಾಜ್ಯ ಗುಣಮಟ್ಟದ ಮಾನಿಟರ್ (ಸಿವಿಲ್) ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಗರಿಷ್ಠ 65 ವರ್ಷ
ರಾಜ್ಯ ಗುಣಮಟ್ಟದ ಮಾನಿಟರ್ (ಕೃಷಿ) ಕೃಷಿಯಲ್ಲಿ ಪದವಿ ಗರಿಷ್ಠ 65 ವರ್ಷ
ರಾಜ್ಯ ಗುಣಮಟ್ಟದ ಮಾನಿಟರ್ (ತೋಟಗಾರಿಕೆ) ಕೃಷಿ/ತೋಟಗಾರಿಕೆ ವಿಜ್ಞಾನದಲ್ಲಿ ಪದವಿ ಗರಿಷ್ಠ 65 ವರ್ಷ
ರಾಜ್ಯ ಗುಣಮಟ್ಟದ ಮಾನಿಟರ್ (ಅರಣ್ಯ) ಕೃಷಿ/ಅರಣ್ಯ/ವಿಜ್ಞಾನದಲ್ಲಿ ಪದವಿ ಗರಿಷ್ಠ 65 ವರ್ಷ
ರಾಜ್ಯ ಗುಣಮಟ್ಟದ ಮಾನಿಟರ್ (ರೇಷ್ಮೆ ಕೃಷಿ) ಪದವಿ ಗರಿಷ್ಠ 65 ವರ್ಷ

 

ವಯಸ್ಸಿನ ಸಡಿಲಿಕೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕರ್ನಾಟಕ ನಿಯಮಗಳ ಪ್ರಕಾರ

ಇದನ್ನು : ವಾಣಿಜ್ಯ ಸಚಿವಾಲಯದಲ್ಲಿ 65 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆ
ಇಮೇಲ್​ ಮುಖಂತರ

ಇಮೇಲ್​ ವಿಳಾಸ: [email protected]

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15-06-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-ಜುಲೈ-2022
ಪ್ರಮುಖ ಲಿಂಕ್​ಗಳು:
ಅಧಿಕೃತ ಅಧಿಸೂಚನೆ ಫಿಡಿಎಫ್​ಗೆ ಇಲ್ಲಿ ಕ್ಲಿಕ್​ ಮಾಡಿ
ಅಧಿಕೃತ ವೆಬ್​ಸೈಟ್​​: rdpr.karnataka.gov.in

ಅರ್ಜಿ ಸಲ್ಲಿಕೆ ವಿಧಾನ:

-ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

-ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

-ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಸಹಾಯಕ ನಿರ್ದೇಶಕರು(ಆಡಳಿತ) ಇವರ ಕಚೇರಿ ದೂರವಾಣಿ ಸಂಖ್ಯೆ 080-22879464ಗೆ ಕರೆ ಮಾಡಬಹುದು


Spread the love

About Laxminews 24x7

Check Also

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿ

Spread the love ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ