Breaking News

ಹಂಪ್‌ ಹಾರಿಸಿದ ಚಾಲಕ: ಕಂಡಕ್ಟರ್ ಕಾಲು ಕಟ್‌

Spread the love

ಕುಣಿಗಲ್: ಕೆಎಸ್ ಆರ್ ಟಿಸಿ ಬಸ್ ಚಾಲಕ ರಸ್ತೆ ಹಂಪ್‌ ನಲ್ಲಿ ಅಜಾಗರೂಕತೆಯಿಂದ ಚಲಾಯಿಸದ ಕಾರಣ ನಿರ್ವಾಹಕನ ಕಾಲು ಮುರಿದ ಘಟನೆ ತಾಲೂಕಿನ ಹಳೇಯ ರಾಷ್ಟ್ರೀಯ ಹೆದ್ದಾರಿ 48 ಗೊಟ್ಟಿಕೆರೆ ಸಮೀಪ ಶುಕ್ರವಾರ ನಡೆದಿದೆ.

ಕೋಲಾರ ವಿಭಾಗದ ಬಸ್ ನಿರ್ವಾಹಕ ಸಂಗಪ್ಪ ಹಕ್ಕಿ (45) ಕಾಲು ಮುರಿದುಕೊಂಡ ನಿರ್ವಾಹಕ.

 

ಘಟನೆ ವಿವರ : ಶುಕ್ರವಾರ ಧರ್ಮಸ್ಥಳದಿಂದ ಹೊರಟ ಬಸ್ ಕುಣಿಗಲ್ ಮಾರ್ಗವಾಗಿ ಕೊಲಾರಕ್ಕೆ ತೆರಳುತ್ತಿತ್ತು. ಈ ವೇಳೆ ತಾಲೂಕಿನ ಗೊಟ್ಟಿಕೆರೆ ಬಳಿ ಚಾಲಕ ಮಹತೇಶ್ ಏಕಾಏಕಿ ಹಂಪ್‌ ಹಾರಿಸಿದ ಕಾರಣ ಬಸ್ ನಲ್ಲಿ‌ ನಿಂತಿದ್ದ ಸಂಗಪ್ಪನ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ.

ಕೂಡಲೇ ಗಾಯಾಳುವನ್ನು ಕುಣಿಗಲ್‌ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ