Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಮೂಡಲಗಿಯಲ್ಲಿ ಏಳು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಡಿಎಚ್‍ಓ ಡಾ.ಮಹೇಶ ಕೋಣಿ ಮಹತ್ವದ ಹೇಳಿಕೆ

ಮೂಡಲಗಿಯಲ್ಲಿ ಏಳು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಡಿಎಚ್‍ಓ ಡಾ.ಮಹೇಶ ಕೋಣಿ ಮಹತ್ವದ ಹೇಳಿಕೆ

Spread the love

ಏಳು ನವಜಾತ ಶಿಶುಗಳ ಮೃತದೇಹಗಳು ಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.

ಹೌದು ಏಳು ನವಜಾತ ಶಿಶುಗಳ ಮೃತದೇಹವನ್ನು ಕಿರಾತಕರು ಹಳ್ಳಕ್ಕೆ ಬಿಟ್ಟಿದ್ದು.. ಡಬ್ಬದಲ್ಲಿ ಹಾಕಿ ನವಜಾತ ಶಿಶುಗಳನ್ನು ಕೀಚಕರು ಹಳ್ಳಕ್ಕೆ ಬಿಟ್ಟಿದ್ದಾರೆ. ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಏಳು ನವಜಾತ ಶಿಶುಗಳ ಮೃತ ದೇಹ ಪತ್ತೆಯಾಗಿವೆ.
ಖಚಿತವಾಗಿ ಯಾರು ಈ ಶವಗಳನ್ನು ಎಸೆದರು..? ಏಕೆ ಎಸೆದರು..? ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತದೇಹ ಕಂಡು ಮೂಡಲಗಿಯ ಜನ ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಮೂಡಲಗಿಯಲ್ಲಿ ಏಳು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಡಿಎಚ್‍ಓ ಡಾ.ಮಹೇಶ ಕೋಣಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಮೂಡಲಗಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಪಟ್ಟಣದ ಸೇತುವೆ ಕೇಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆಯಾಗಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆ ದೂರು ದಾಖಲಿಸುತ್ತಿದ್ದೇವೆ.

ಇವೆಲ್ಲವೂ ಭ್ರೂಣಗಳು ಐದು ತಿಂಗಳು ತುಂಬಿವೆ. ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು.

ಇದನ್ನ ಯಾರು ಮಾಡಿದ್ದಾರೆ, ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ತನಿಖೆ ಮಾಡಲಾಗುವುದು. ಭ್ರೂಣ ಹತ್ಯೆ ಕುರಿತು ತನಿಖೆಗೆ ಒಂದು ತಂಡ ರಚನೆ ಮಾಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಂಡ ರಚನೆ ಮಾಡ್ತಿವಿ ಎಂದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ