Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ ಗಡಿ ಗಲಾಟೆಯಲ್ಲಿ ಏಕನಾಥ ಶಿಂಧೆ 40 ದಿನ ಜೈಲಿನಲ್ಲಿದ್ದ ಶಿವಸೈನಿಕ

ಬೆಳಗಾವಿ ಗಡಿ ಗಲಾಟೆಯಲ್ಲಿ ಏಕನಾಥ ಶಿಂಧೆ 40 ದಿನ ಜೈಲಿನಲ್ಲಿದ್ದ ಶಿವಸೈನಿಕ

Spread the love

ಮಹಾರಾಷ್ಟ್ರದ ಮಹಾ ಆಘಾಡಿ ಸರಕಾರ ಪತನದ ಅಂಚಿಗೆ ತಲುಪಿರುವಂತೆ ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರೇ ಏಕನಾಥ ಶಿಂಧೆ. ಒಂದು ಕಾಲದ ಹಾರ್ಡ್‌ಕೋರ್‌ ಶಿವಸೈನಿಕ, ಬಾಳಾ ಸಾಹೇಬ್‌ ಠಾಕ್ರೆ ಅವರ ಕಟ್ಟಾ ಬೆಂಬಲಿಗ, ನಾಲ್ಕು ಅವಧಿಯ ಶಾಸಕ, ಕಾರ್ಪೊರೇಟರ್‌, ಸ್ಥಳೀಯ ಮಟ್ಟದಲ್ಲಿ ಅತ್ಯಂತ ಜನಪ್ರಿಯ ನಾಯಕ…

ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆ ಸರಕಾರ ಮಾಡಿದಾಗ ಲಿಂದಲೂ, ತೀರಾ ಅಸಹನೆಯಲ್ಲಿದ್ದ ಶಿವಸೇನೆಯ ಹಿರಿಯ ನಾಯಕ, ಸದ್ಯ ಪಕ್ಷದ ವಿರುದ್ಧವೇ ಸಿಡಿದು ನಿಂತಿದ್ದಾರೆ. ಅಷ್ಟೇ ಅಲ್ಲ, ಉದ್ಧವ್‌ ಠಾಕ್ರೆಯ ಅತ್ಯಂತ ನಿಕಟವರ್ತಿಯಾಗಿದ್ದರೂ ಎಲ್ಲೋ ಒಂದು ಕಡೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅರಿತ ಕೂಡಲೇ ತಮ್ಮ ಪ್ರಭಾವ ತೋರಿಸಿದ್ದಾರೆ.

1980ರ ದಶಕದಲ್ಲಿ ರಾಜಕೀಯವಾಗಿ ಮುನ್ನೆ ಲೆಗೆ ಬಂದ ಏಕನಾಥ ಶಿಂಧೆ, ಶಿವಸೇನೆಯ ಮತ್ತೂಬ್ಬ ನಾಯಕ, ಥಾಣೆಯ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್‌ ಡಿಘೆ ಸಾಹೇಬ್‌ ಗರಡಿಯಲ್ಲಿ ಬೆಳೆದವರು. ಆರಂಭದಲ್ಲಿ ಕಿಸಾನ್‌ ನಗರ ಪ್ರದೇಶದ ಶಿವಸೇನೆಯ ಶಾಖಾ ಹೋರಾಟಗಾರನಾಗಿದ್ದ ಏಕನಾಥ್‌, ಮುಂದೆ ಕಾರ್ಪೊರೇಟರ್‌ ಆಗಿ, ಶಾಸಕನಾಗಿ ಬೆಳೆದು ನಿಂತರು.
58 ವರ್ಷದ ಏಕನಾಥ ಶಿಂಧೆ, ಮಹಾರಾಷ್ಟ್ರದ ಸತಾರಾ ಮೂಲದವರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಆರಂಭಿಸಿ, ಬಳಿಕ ಆಟೋ ಡ್ರೈವರ್‌ ಆದ ಇವರು, 1980ರಲ್ಲಿ ತಮ್ಮ ಗುರು ಎಂದೇ ಹೇಳಿಕೊಳ್ಳುವ ಆನಂದ್‌ ದಿಘೆ ಸಾಹೇಬ್‌ ಅವರ ಕಣ್ಣಿಗೆ ಬಿದ್ದರು.

ಶಿಂಧೆಯ ಪ್ರಮುಖ ಸಾಮರ್ಥ್ಯವೇ ಜನರನ್ನು ಸೇರಿಸುವುದಾಗಿತ್ತು. ಶಿವಸೇನೆಯ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದ ಇವರು, ದಿಘೆೆ ಅವರ ಸಮಾಜ ಕಲ್ಯಾಣ ಕೆಲಸದಲ್ಲಿ ಭಾಗಿಯಾಗುತ್ತಿದ್ದರು. ಅಷ್ಟೆ ಅಲ್ಲ, ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಇದಕ್ಕಾಗಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿ 40 ದಿನ ಕಳೆದಿದ್ದರು. 2014ರಲ್ಲಿ ಬಿಜೆಪಿ- ಶಿವಸೇನೆ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದರು. ಈಗ ಉದ್ಧವ್‌ ಠಾಕ್ರೆ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ವಿಚಿತ್ರವೆಂದರೆ, ಈಗ ಶಿವಸೇನೆ ವಿರುದ್ಧ ಬಂಡೇಳುವವರೆಗೂ ಪಕ್ಷದಲ್ಲಿ ಟ್ರಬಲ್‌ ಶೂಟರ್‌ ಎಂದೇ ಗುರುತಿಸಿಕೊಂಡಿದ್ದವರು ಶಿಂಧೆ. ಆದರೆ 2019ರ ಅನಂತರ ಕಾಂಗ್ರೆಸ್‌-ಎಸ್‌ಸಿಪಿ ಜತೆ ಸರಕಾರ ರಚನೆ ಮಾಡಿದ ಮೇಲೆ ಒಂದಷ್ಟು ಅಸಮಾಧಾನ ಗೊಂಡಿದ್ದರು. ಬಿಜೆಪಿ ನಾಯಕರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿಯೇ ಬಿಜೆಪಿ ಸರಕಾರದ ಮೇಲೆ ಎಷ್ಟೇ ಟೀಕೆ ಮಾಡಿದರೂ ಶಿಂಧೆ ಅವರನ್ನು ಗುರಿಯಾಗಿಸಿ ಯಾವುದೇ ಟೀಕೆ ಮಾಡುತ್ತಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.


Spread the love

About Laxminews 24x7

Check Also

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ’ : ನಿರ್ಮಲಾ ಸೀತಾರಾಮನ್ ಘೋಷಣೆ

Spread the loveನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಹಣವಿಲ್ಲದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಣಕಾಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ