Breaking News
Home / ರಾಜಕೀಯ / ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ:

ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ:

Spread the love

ಬೆಂಗಳೂರು: ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಸಹಸ್ರಾರು ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತ ಸಂಸದ ರಾಹುಲ್​ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆಯೇ, ನಟಿ, ಮಾಜಿ ಸಂಸದೆ ರಮ್ಯಾ ಮತ್ತೆ ರಾಹುಲ್​ ಗಾಂಧಿ ಪರ ಬ್ಯಾಟಿಂಗ್​ ಬೀಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ರಾಹುಲ್​ ಗಾಂಧಿಯವರ ವಿರುದ್ಧ ವಿನಾಕಾರಣ ಸುಳ್ಳು ಆಪಾದನೆ ಹೊರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾನು ರಾಹುಲ್​ ಗಾಂಧಿಯವರ ಜತೆ ಅತ್ಯಂತ ಸಮೀಪದಿಂದ ಕೆಲಸ ಮಾಡಿದ್ದೇನೆ. ಅವರನ್ನು ನಾನು ಅತಿ ಹತ್ತಿರದಿಂದ ನೋಡಿದಂತೆ ಅವರು ಎಂದಿಗೂ ಭ್ರಷ್ಟರು ಎಂದು ಎನಿಸಲಿಲ್ಲ. ಅವರು ಭ್ರಷ್ಟರೂ ಅಲ್ಲ, ದುರಾಸೆಯ ವ್ಯಕ್ತಿಯೂ ಅಲ್ಲ. ಅವರನ್ನು ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದಿದ್ದಾರೆ.

ರಾಹುಲ್​ ಗಾಂಧಿಯವರ ಹೆಸರಿಗೆ ಕಳಂಕ ತರಲು ಈ ರೀತಿ ಮಾಡಲಾಗುತ್ತಿದೆ. ವಿನಾಕಾರಣ ಅವರನ್ನು ಈ ಪ್ರಕರಣದಲ್ಲಿ ಎಳೆಯಲಾಗುತ್ತಿದೆ ಎಂದು ಟ್ವೀಟ್​ ಮೂಲಕ ನಟಿ ಕಿಡಿ ಕಾರಿದ್ದಾರೆ.

 


Spread the love

About Laxminews 24x7

Check Also

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, 12 ದಿನದೊಳಗೆ ತನಿಖೆಯ ವರದಿ ಸಲ್ಲಿಸುವಂತೆ ಸೂಚನೆ : ಜಿ.ಪರಮೇಶ್ವರ್

Spread the loveತುಮಕೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ‌ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ