Breaking News

ಪ್ರತಿ ದಿನವೂ ಎಣ್ಣೆ ಬೇಕು ಅಣ್ಣ.. ಮದ್ಯ ಇಲ್ಲದೇ ಆಹಾರ ತಿನ್ನಲ್ಲವಂತೆ ಈ ಹುಂಜ!

Spread the love

ಭಂಡಾರ(ಮಹಾರಾಷ್ಟ್ರ): ಮದ್ಯಪಾನ ಮಾಡಿದ ಬಳಿಕವೇ ಊಟ ಮಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ.

ಆದರೆ, ಇಲ್ಲೊಂದು ವಿಚಿತ್ರ ಪ್ರಕರಣವಿದೆ. ಮಹಾರಾಷ್ಟ್ರದ ಭಂಡಾರದಲ್ಲಿರುವ ಹುಂಜವೊಂದು ಬೆಳಗಾಗುತ್ತಿದ್ದಂತೆ ಮದ್ಯ ಸೇವನೆ ನಂತರವೇ ಕಾಳು ತಿನ್ನಲು ಶುರು ಮಾಡುತ್ತೆ. ಮದ್ಯ ನೀಡದಿದ್ದರೆ ಹಠ ಹಿಡಿದು ಆಹಾರ, ನೀರು ಕೂಡ ಮುಟ್ಟಲ್ವಂತೆ. ಇದು ನಂಬಲು ತುಸು ಕಷ್ಟವಾದರೂ ಸತ್ಯ ಸಂಗತಿ ಅಂತಿದ್ದಾರೆ ಹುಂಜದ ಮಾಲೀಕರು.

ಪ್ರತಿ ದಿನವೂ ಎಣ್ಣೆ ಬೇಕು ಅಣ್ಣ.. ಮದ್ಯ ಇಲ್ಲದೇ ಆಹಾರ ತಿನ್ನಲ್ಲವಂತೆ ಈ ಹುಂಜ!ಮಹಾರಾಷ್ಟ್ರ ರಾಜ್ಯದ ಭಂಡಾರದ ಪುನರ್ವಸತಿ ಗ್ರಾಮ ಪಿಂಪ್ರಿಯಲ್ಲಿ ಭಾವು ಕಾಟೋರೆ ಎಂಬುವರು ಕೋಳಿ ಸಾಕಾಣಿಕೆ ಮಾಡ್ತಿದ್ದಾರೆ. ವಿವಿಧ ತಳಿಯ ಕೋಳಿ, ಹುಂಜ ಇವರ ಫಾರ್ಮ್​​ನಲ್ಲಿವೆ. ಅದರಲ್ಲಿರುವ ಹುಂಜವೊಂದು ಪ್ರತಿದಿನ ಮದ್ಯಪಾನ ಮಾಡುತ್ತದೆ. ಇದರಿಂದ ಇಡೀ ಕುಟುಂಬಕ್ಕೆ ದೊಡ್ಡ ತಲೆನೋವು ಶುರುವಾಗಿದೆ.

ಹುಂಜ ಮದ್ಯಪಾನ ಸೇವನೆ ಶುರು ಮಾಡಿದ್ದು ಹೇಗೆ?: ಕಳೆದ ವರ್ಷ ಈ ಹುಂಜ ರೋಗಕ್ಕೆ ತುತ್ತಾಗಿತ್ತು. ಹೀಗಾಗಿ, ಆಹಾರ ತಿನ್ನುವುದನ್ನ ಸಂಪೂರ್ಣವಾಗಿ ತ್ಯಜಿಸಿತ್ತು. ಈ ವೇಳೆ ಗ್ರಾಮದ ವ್ಯಕ್ತಿಯೋರ್ವರು ಪರಿಹಾರವಾಗಿ ಮದ್ಯಪಾನ ನೀಡುವಂತೆ ತಿಳಿಸಿದ್ದರಂತೆ. ಹೀಗಾಗಿ, ಕೆಲ ದಿನಗಳ ಕಾಲ ಮದ್ಯ ನೀಡಿದ್ದಾರೆ. ಸ್ಥಳೀಯ ಅಂಗಡಿಯಲ್ಲಿ ಮದ್ಯ ಸಿಗದಿದ್ದಾಗ ವಿದೇಶಿ ಅಲ್ಕೋಹಾಲ್​ ಸಹ ನೀಡಿದ್ದಾರೆ. ರೋಗದಿಂದ ಸಂಪೂರ್ಣವಾಗಿ ಹುಂಜ ಗುಣಮುಖವಾಗಿದೆ. ಆದರೆ, ಕುಡಿತದ ಚಟಕ್ಕೆ ಅಟ್ಟಿಕೊಂಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ