Breaking News

ಬರೋಬ್ಬರಿ 24 ಮಂದಿಯ ಹೆಸರನ್ನು ರಿಲೀವ್ ಮಾಡಿದ್ದಾರೆ:ಸಂಜನಾ

Spread the love

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದು, ಈ ವೇಳೆ ಸಂಜನಾ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ

ಸಿಸಿಬಿ ಕಚೇರಿಯಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಂಜನಾರನ್ನು ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಸಂಜನಾ ಬರೋಬ್ಬರಿ 24 ಮಂದಿಯ ಹೆಸರನ್ನು ರಿಲೀವ್ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೊದಲಿಗೆ ಸಂಜನಾ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ನಂತರ ಸಿಸಿಬಿ ಅಧಿಕಾರಿಗಳು ದಾಖಲೆ ಸಮೇತ ಪ್ರಶ್ನೆ ಮಾಡಿದ್ದಾರೆ.

ಕೊನೆಗೆ ಸಂಜನಾ ಸಂಜನಾ 24 ಮಂದಿಯ ಹೆಸರನ್ನು ಬಾಯಿಬಿಟ್ಟಿದ್ದಾರೆ. ಆದರೆ ಆ 24 ಜನರ ಯಾರು ಎಂಬುದು ಅಧಿಕೃತವಾಗಿ ಇನ್ನೂ ತಿಳಿದುಬಂದಿಲ್ಲ. ಬೆಂಗಳೂರಿನ ಮಾಜಿ ಶಾಸಕರ ಮಗ, ಸ್ಯಾಂಡಲ್‍ವುಡ್ ಇಬ್ಬರು ತಾರೆಯರು, ಕಿರುತೆರೆಯ ನಾಲ್ಕು ಜನರ ಜೊತೆ ಸ್ನೇಹ ಮಾಡಿದ್ದೇನೆ. ಅಲ್ಲದೇ ಪ್ರಸಿದ್ಧ ಬ್ಯುಸಿನೆಸ್ ಮ್ಯಾನ್ ಮಕ್ಕಳು ಜೊತೆಯಲ್ಲಿ ಪಾರ್ಟಿ ಮಾಡಿರುವುದಾಗಿ ಸಿಸಿಬಿ ಮುಂದೆ ಸಂಜನಾ ತಪ್ಪೊಪ್ಪಿಕೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಮಾಡಿದ ಆರೋಪಕ್ಕೆ ಸಂಜನಾ ಗರಂ ಆಗಿದ್ದರು. ಪ್ರಶಾಂತ್ ಸಂಬರಗಿ ನನ್ನ ಇಮೇಜ್ ಹಾಳು ಮಾಡುತ್ತಿದ್ದಾನೆ. ನನ್ನ ಮೇಲೆ ಆರೋಪ ಮಾಡಲು ಆತನ ಬಳಿ ಸಾಕ್ಷ್ಯ ಏನಿದೆ. ಸಿಕ್ಕ ಸಿಕ್ಕ ಕಡೆ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾನೆ. ಅಲ್ಲದೇ ಹಳೆ ದ್ವೇಷಕ್ಕಾಗಿ ನನ್ನ ಮೇಲೆ ಡ್ರಗ್ ಆರೋಪ ಹೊರಿಸುತ್ತಿದ್ದಾನೆ ಎಂದು ಸಂಜನಾ ಗರಂ ಆಗಿದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ