Breaking News

ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ ವೇಳೆಯೇ ಟಿಟಿ ವಾಹನ ಪಲ್ಟಿ

Spread the love

ಶಿವಮೊಗ್ಗ: ಸಿಗಂದೂರು ಸಮೀಪ ಟಿಟಿ ವಾಹನ ಪಲ್ಟಿಯಾಗಿ ಐವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಶಿವಮೊಗ್ಗದ ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿ ಗ್ರಾಮದ ಬಳಿ ಟಿಟಿ ಪಲ್ಟಿಯಾಗಿದೆ. ಬೆಂಗಳೂರಿನ ಬಿಡದಿಯವರಾಗಿದ್ದ ಈ ಕುಟುಂಬ ಸಿಗಂದೂರು ದೇವಿ ದರ್ಶನಕ್ಕೆ ತೆರಳಿದ್ದಾರೆ.ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಚಾಲಕನಿಗೆ ಪಿಡ್ಸ್​ ಬಂದಿದೆ.

 

ಚಲಿಸುವಾಗ ಡ್ರೈವರ್ ಗೆ ಪಿಡ್ಸ್ ಬಂದಿದ್ದರಿಂದ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿಯಾಗಿ ಟಿಟಿ ವಾಹನ ಪಲ್ಟಿಯಾಗುತ್ತಲೇ ತಗ್ಗು ಪ್ರದೇಶದ ಮನೆ ಮುಂಭಾಗ ಬಿದ್ದಿದ್ದು, ಅದೃಷ್ಟವಶಾತ್​ ಹೆಚ್ಚು ಹಾನಿ ಸಂಭವಿಸಿಲ್ಲ. ಆದರೆ ಓರ್ವನ ಸ್ಥಿತಿ ಮಾತ್ರ ಗಂಭೀರವಾಗಿದೆ.

ಬೆಂಗಳೂರು ಸಮೀಪದ ಬಿಡದಿ ಮೂಲದ ಒಂದೇ ಕುಟುಂಬಸ್ಥರು ದೇವಾಲಯಕ್ಕೆ ಆಗಮಿಸಿದ್ದರು.ಗಾಯಾಳುಗಳಿಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ