Breaking News
Home / ರಾಜಕೀಯ / ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸರ್ಕಾರು ವಾರಿ ಪಾಟ’; ಮಹೇಶ್​ ಬಾಬು ಸಿನಿಮಾ ದಾಖಲೆ

ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸರ್ಕಾರು ವಾರಿ ಪಾಟ’; ಮಹೇಶ್​ ಬಾಬು ಸಿನಿಮಾ ದಾಖಲೆ

Spread the love

ಮೊದಲಾರ್ಧವನ್ನು ಇಷ್ಟಪಟ್ಟ ಫ್ಯಾನ್ಸ್​ ಸೆಕೆಂಡ್ ಹಾಫ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ.

ಸದ್ಯಪ್ಯಾನ್ ಇಂಡಿಯಾಟ್ರೆಂಡ್ ಜೋರಾಗಿದೆ. ಆದರೆ, ಮಹೇಶ್ ಬಾಬು ಸಿನಿಮಾ ತೆಲುಗಿನಲ್ಲಿ ಮಾತ್ರ ತೆರೆಗೆ ಬಂದಿದೆ. ಆದಾಗ್ಯೂ ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಹೊರತಾಗಿಯೂ ಮಹೇಶ್ ಬಾಬು ಫ್ಯಾನ್ಸ್ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.

‘ಸರ್ಕಾರು ವಾರಿ ಪಾಟ’ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ದೊಡ್ಡದೊಡ್ಡ ಉದ್ಯಮಿಗಳು ಬ್ಯಾಂಕ್​ಗೆ ಮಾಡಿರುವ ವಂಚನೆ ವಿಚಾರವನ್ನೇ ಇಟ್ಟುಕೊಂಡು ಈ ಸಿನಿಮಾ ಸಿದ್ಧಗೊಂಡಿದೆ. ಮೊದಲಾರ್ಧವನ್ನು ಇಷ್ಟಪಟ್ಟ ಫ್ಯಾನ್ಸ್​ ಸೆಕೆಂಡ್ ಹಾಫ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ಟ್ರೇಡ್​ ಅನಲಿಸ್ಟ್​ ಮನೋಬಲ ವಿಜಯಬಾಲನ್ ಅವರು ವಿವರ ನೀಡಿದ್ದಾರೆ.

‘ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 75.21 ಕೋಟಿ ರೂಪಾಯಿ ಹಾಗೂ ಎರಡನೇ ದಿನ 27.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 102 ಕೋಟಿ ರೂಪಾಯಿ ಆಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

 

ಇಂದು (ಮೇ 14) ಹಾಗೂ ನಾಳೆ (ಮೇ 15) ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ವೀಕೆಂಡ್ ಆದ್ದರಿಂದ ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಇದೇ ರೀತಿಯ ಕಲೆಕ್ಷನ್ ಮುಂದುವರಿದರೆ ಈ ಸಿನಿಮಾ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.

ಮಹೇಶ್​ ಬಾಬು ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಅವರ ಸಿನಿಮಾಗಳು ದಕ್ಷಿಣದಲ್ಲಿ ಸೂಪರ್​ ಹಿಟ್​ ಆಗುತ್ತವೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಸರಿಲೇರು ನೀಕೆವ್ವರು’ ಸಿನಿಮಾ ಕೂಡ ಹಿಟ್​ ಆಗಿತ್ತು. ಈಗ ಅವರು ‘ಸರ್ಕಾರು ವಾರಿ ಪಾಟ’ ಚಿತ್ರದ ಮೂಲಕ ಮತ್ತೊಂದು ಗೆಲುವು ಕಂಡಿದ್ದಾರೆ. 


Spread the love

About Laxminews 24x7

Check Also

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Spread the loveರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ