Breaking News
Home / ರಾಜಕೀಯ / ಸಾರ್ವಜನಿಕರ ಎದುರಲ್ಲೇ ಮಹಿಳೆ ಅಂತಾ ನೋಡದೇ ವ್ಯಕ್ತಿಯೊಬ್ಬ ವಕೀಲೆಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ

ಸಾರ್ವಜನಿಕರ ಎದುರಲ್ಲೇ ಮಹಿಳೆ ಅಂತಾ ನೋಡದೇ ವ್ಯಕ್ತಿಯೊಬ್ಬ ವಕೀಲೆಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ

Spread the love

ಬಾಗಲಕೋಟೆ: ಸಾರ್ವಜನಿಕರ ಎದುರಲ್ಲೇ ಮಹಿಳೆ ಅಂತಾ ನೋಡದೇ ವ್ಯಕ್ತಿಯೊಬ್ಬ ವಕೀಲೆಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಗಲಕೋಟೆ ನಗರದ ವಿನಾಯಕ ನಗರದ ಕ್ರಾಸ್​ನಲ್ಲಿ ನಡೆದಿದೆ.

ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆದಿದೆ.

ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬಾತನ ವಿರುದ್ಧ ಮಾರಣಾಂತಿಕ‌ವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನನಗೆ ಕಾಲು, ಎದೆಭಾಗ ಹಾಗೂ ತಲೆಗೆ ಪೆಟ್ಟಾಗಿದೆ ಮತ್ತು ನನ್ನ ಪತಿಗೆ ಕಿವಿ ಹಾಗೂ ತಲೆಗೆ ಗಾಯವಾಗಿದೆ ಎಂದು ವಕೀಲೆ ಸಂಗೀತಾ ಹೇಳಿದ್ದಾರೆ.

ವಕೀಲೆ ಪತಿಯ ಕಿವಿಯಿಂದ ರಕ್ತ ಸುರಿದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಆರೋಗ್ಯ ಸಿಬ್ಬಂದಿ ಇಬ್ಬರನ್ನು ಆಯಂಬುಲೆನ್​ನಲ್ಲಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಬಿಜೆಪಿ ಮುಖಂಡನ ವಿರುದ್ಧ ಆರೋಪ
ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆಂದು ವಕೀಲೆ ಆರೋಪಿಸಿದ್ದಾರೆ. ಕೆಲ‌ ದಿನಗಳ ಹಿಂದೆ ಬಿಜೆಪಿ‌ ಮುಖಂಡ ರಾಜು ನಾಯ್ಕರ್ ತಮ್ಮ ಮೇಲೆ‌ ದೌರ್ಜನ್ಯ ಮಾಡಿದ್ದಾರೆ. ಮೇ 8 ರಂದು‌ ನಸುಕಿನ ಜಾವ ಬುಲ್ಡೋಜರ್​ನಿಂದ ನಮ್ಮ ಮನೆಯ ಮುಂದಿನ ಕಂಪೌಂಡ್ ಹಾಗೂ ಶೌಚಾಲಯ ಕೆಡವಿದ್ದಾರೆ. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಅಗಿದ್ದವು. ಮನೆಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ರಾಜು ನಾಯ್ಕರ್ ಹಾಗೂ ವಕೀಲೆ ನಡುವೆ‌ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ರಾಜು ನಾಯ್ಕರ್ ವಿರುದ್ಧ ಠಾಣೆಯಲ್ಲಿ ದೂರು ಕೊಡುತ್ತಿರುವುದರಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ದೇಶನೂರ| ನಿರ್ಲಕ್ಷ್ಯಕ್ಕೊಳಗಾದ ಪ್ರೇಮದ ಸಂಕೇತ ‘ನಿರಂಜನಿ ಮಹಲ್‌’

Spread the love ನೇಸರಗಿ (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮನ ಕಾಲದಲ್ಲಿ ಉಪರಾಜಧಾನಿಯಾಗಿ ಮೆರೆದ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ