Breaking News

ಯುವಕನ ಕೈಯಲ್ಲಿ ಮಗು ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆ

Spread the love

ರಾಯಚೂರು : ಶೌಚಾಯಲಯಕ್ಕೆ ಹೋಗಿ ಬರ್ತಿನಿ ಇಟ್ಕೊಳಿ ಅಂತ ಹೇಳಿ ಅಪರಿಚಿತ ಮಹಿಳೆ 9 ತಿಂಗಳ ಹಸುಗೂಸನ್ನು ಯುವಕನೊಬ್ಬನ ಕೈಗೆ ಕೊಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಮೈಸೂರು ಮೂಲದ ಯುವಕ ಕೆಲಸದ ಮೇಲೆ ರಾಯಚೂರಿಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಯುವಕ ಕರೆತಂದ ಮಗುವನ್ನು ಲಷ್ಕರ್ ಠಾಣೆ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

 

ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು. ಈ ಮಧ್ಯೆ ಮೈಸೂರಿಗೆ ಹಿಂದಿರುಗಲು ರಘು ರಾಯಚೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಬಂದ ಅಪರಿಚಿತ ಮಹಿಳೆ ಮಗುವನ್ನ ಕೊಟ್ಟು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ