Breaking News

ನಿಮ್ಮನ್ನು ಸಿಎಂ ಮಾಡ್ತೇವೆ 2500 ಕೋಟಿ ಕೊಡಿ ಎಂದಿದ್ರು: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್

Spread the love

ಬೆಳಗಾವಿ: ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾತನಾಡಿದ ಅವರು, 2500 ಕೋಟಿ ರೂ.

ಕೇಳಿದಾಗ ನಾನು 2500 ಕೋಟಿ ಅಂದರೆ ಏನು ಅಂತ ತಿಳಿದಿದ್ದೀರಿ ಎಂದು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೇಗೆ ಇಡುವುದು? ಕೋಣೆಯಲ್ಲಿ ಇಡುವುದಾ? ಗೋದಾಮಿನಲ್ಲಿ ಇಡುವುದಾ? ಎಂದಿದ್ದೆ. ಟಿಕೆಟ್ ಕೊಡಿಸುತ್ತೇವೆ ಎಂದು ಎಲ್ಲಾ ಕಡೆ ಮೋಸ ಮಾಡುತ್ತಾರೆ. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ ಎಂದು ತಿಳಿಸಿದ್ದಾರೆ.

ದೆಹಲಿಗೆ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳುತ್ತಾರೆ. ಸೋನಿಯಾ ಗಾಂಧಿ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿಸುತ್ತೇವೆ ಎನ್ನುತ್ತಾರೆ. ನಾನು ವಾಜಪೇಯಿಯವರ ಅವಧಿಯಲ್ಲಿ ಕೆಲಸ ಮಾಡಿದವನು. ನನ್ನನ್ನು ಅಡ್ವಾಣಿ, ರಾಜನಾಥ್, ಜೇಟ್ಲಿ ಅವರು ಹೆಸರಿಡಿದು ಕರೆಯುತ್ತಿದ್ದರು. ನನಗೇ 2500 ಕೋಟಿ ಕೊಡಿ ಸಿಎಂ ಮಾಡುತ್ತೇವೆ ಎಂದಿದ್ದರು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ