Breaking News

ಶಾರುಖ್ ಖಾನ್​ ಮನೆಯ ಹೊಸ ನೇಮ್​ಪ್ಲೇಟ್ ಬೆಲೆ ಎಷ್ಟು? ಈ ದುಡ್ಡಲ್ಲಿ ಐಷಾರಾಮಿ ಕಾರನ್ನೇ ಖರೀದಿಸಬಹುದು

Spread the love

ಗೌರಿ ಖಾನ್​ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಅವರಿಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ‘ಮನ್ನತ್​’ಗೆ ಹೊಸ ನೇಮ್​ಪ್ಲೇಟ್ ಹಾಕಲು ಅವರೇ ಆಸಕ್ತಿ ತೋರಿದ್ದರು.
ಸೆಲೆಬ್ರಿಟಿಗಳು ಮಾಡುವ ಸಣ್ಣ ಕೆಲಸಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ.

ಅವರು ಕಾರು ಖರೀದಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಯಾಗುತ್ತದೆ. ಶಾರುಖ್ ಖಾನ್ ಅವರು (Shah Rukh Khan) ಇದೇ ರೀತಿಯ ವಿಚಾರದಲ್ಲಿ ಸುದ್ದಿಯಾಗಿದ್ದರು. ಅವರ ಮನೆ
ಮನ್ನತ್
​​ನ (Mannat) ನೇಮ್​ಪ್ಲೇಟ್ ಬದಲಾಯಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಟ್ವಿಟರ್​ನಲ್ಲಿ ಮನ್ನತ್ ಹೆಸರು ಟ್ರೆಂಡ್ ಆಗಿತ್ತು. ಈಗ ಈ ಬಗ್ಗೆ ಹೊಸದೊಂದು ಅಪ್​ಡೇಟ್ ಬಂದಿದೆ. ಈ ನೇಮ್​ಪ್ಲೇಟ್ ಡಿಸೈನ್ ಮಾಡಿದ್ದು ಶಾರುಖ್ ಪತ್ನಿ ಗೌರಿ ಖಾನ್​. ಇದಕ್ಕೆ ತಗುಲಿದ ಬೆಲೆ ಕೇಳಿ ಅನೇಕರು ಕಣ್ಣರಳಿಸಿದ್ದಾರೆ.

ಗೌರಿ ಖಾನ್​ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಅವರಿಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ‘ಮನ್ನತ್​’ಗೆ ಹೊಸ ನೇಮ್​ಪ್ಲೇಟ್ ಹಾಕಲು ಅವರೇ ಆಸಕ್ತಿ ತೋರಿದ್ದರು. ಅಂತೆಯೇ ಅವರೇ ಮುಂದಾಳತ್ವ ವಹಿಸಿ ಬೋರ್ಡ್ ಸಿದ್ಧಪಡಿಸಿದ್ದಾರೆ. ಈ ಬೋರ್ಡ್​ಗೆ ಸುಮಾರು 20-25 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ