Breaking News

ವನ್ಯಜೀವಿ ಸಂರಕ್ಷಣೆಯ ಸಂದೇಶಕ್ಕೆ 249 ಕಿ.ಮೀ ಸೈಕಲ್ ತುಳಿದ ಅರಣ್ಯಾಧಿಕಾರಿ

Spread the love

ಮುಂಬೈ: ಅರಣ್ಯ ಅಧಿಕಾರಿಯೊಬ್ಬರಿಗೆ ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಯಾಗಿತ್ತು. ಅಧಿಕಾರ ವಹಿಸಿಕೊಳ್ಳವ ಶುಭ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸಲು 249 ಕಿ.ಮೀ ಸೈಕಲ್ ತುಳಿದು ಎಲ್ಲಡೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದ ಅರಣ್ಯ ಅಧಿಕಾರಿ ನಾನಾ ಸಾಹೇಬ್ ಲಾಡ್ಕತ್, ಬಿರು ಬಿಸಿಲ ನಡುವೆ ಕೆಲ ಘಟ್ಟ ಪ್ರದೇಶಗಳನ್ನು ದಾಟಿ 17 ಗಂಟೆಗಳ ನಂತರ ಕೊಲ್ಲಾಪುರ ತಲುಪಿದ್ದಾರೆ. ಈ ವೇಳೆ 12 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ.

ಲಾಡ್ಕತ್ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಹುದ್ದೆ ಸ್ವೀಕರಿಸಿದ್ದಾರೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸಂದೇಶ ನೀಡುವುದು ಸ್ಲೈಕ್ಲಿಂಗ್ ಹಿಂದಿನ ಉದ್ದೇಶ ಎಂದು ಲಾಡ್ಕತ್ ಹೇಳಿದರು.

ಬಿಸಿಲಿನ ತೀವ್ರತೆ ಹೆಚ್ಚಳದಿಂದ ಸ್ವಲ್ಪ ವಿರಾಮದ ಅಗತ್ಯವಿತ್ತು. ಪುಣೆ ಮತ್ತು ಸಾತರ ಜಿಲ್ಲೆ ನಡುವಿನ ಕಾಂಬಟ್ಕಿ ಘಟ್ಟ ಪ್ರದೇಶದಲ್ಲಿ ತೆರಳುವುದು ಸವಾಲಿನಿಂದ ಕೂಡಿತ್ತು. ಆದರೆ ಹೇಗೋ ಅದನ್ನು ನಿರ್ವಹಿಸಿದೆ. ಸ್ಲೈಕ್ಲಿಂಗ್ ನನ್ನ ಹವ್ಯಾಸವಾಗಿದೆ. ಆರಂಭದಲ್ಲಿ ದಿನವೊಂದರಲ್ಲಿ 60 ಕಿಲೋ ಮೀಟರ್ ದಾಟಿರಲಿಲ್ಲ. ಆದರೆ ಕೊಲ್ಲಾಪುರಕ್ಕೆ ವರ್ಗಾವಣೆಯಾದಾಗ ಅಲ್ಲಿಗೆ ಒಂದು ದಿನದಲ್ಲಿಯೇ ಸೈಕಲ್ ನಲ್ಲಿಯೇ ಹೋಗಬೇಕೆಂದು ನಿರ್ಧರಿಸಿದ್ದೆ ಎಂದು ಖಾಸಗಿ ವಾಹಿನಿಗೆ ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ