Breaking News

ತಂದೆ ಕೊಲೆಗೈದವನನ್ನು ಕಲ್ಲು ಎತ್ತಾಕಿ ಕೊಂದ ಮಗ!

Spread the love

ಚಿಕ್ಕೋಡಿ(ಬೆಳಗಾವಿ): ತಂದೆಯ ಕೊಲೆ ಮಾಡಿರುವ ವೈಷಮ್ಯದಿಂದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಮಗ ಸೇಡು ತೀರಿಸಿಕೊಂಡ ಘಟನೆ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.

ವಿಠ್ಠಲ ಕಮತೆ(35) ಹಾಗೂ ಸುರೇಶ ಡಂಗೇರ್(30) ಕೊಲೆ ಮಾಡಿ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಶೌಕತ್ ನದಾಫ್(45) ಭೀಮಪ್ಪನ ಮಗ ವಿಠ್ಠಲನಿಂದ ಕೊಲೆಯಾದವನು.

10 ವರ್ಷದ ಹಿಂದೆ ಜೈಲಿನಲ್ಲಿದ್ದ ಬೆಂಡವಾಡ ಗ್ರಾಮದ ಭೀಮಪ್ಪ ಕಮತೆಯನ್ನು ಕೊಲೆ ಮಾಡಿರುವ ಆರೋಪವನ್ನು ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದ ಶೌಕತ್ ನದಾಫ್ ಎದುರಿಸುತ್ತಿದ್ದ. ಇದೇ ಸೇಡಿನಿಂದ ಶೌಕತ್ ನದಾಫ್‍ನನ್ನು ಟಾರ್ಗೆಟ್ ಮಾಡಿದ್ದ ಭೀಮಪ್ಪನ ಮಗ ಹಾಗೂ ಸಹಚರರು, ಶೌಕತ್ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಶೌಕತ್ ನದಾಫ್ ಕೊಲೆ ಮಾಡಿ ಶವ ಬಿಸಾಡಿ ಹೋಗಿದ್ದ ದುಷ್ಕರ್ಮಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ