Breaking News

ವಂಚನೆ ಕೇಸ್​: ಅಸ್ಸೋಂ ಪ್ರಕರಣ ಹುಬ್ಬಳ್ಳಿಗೆ ವರ್ಗಾವಣೆ

Spread the love

ಹುಬ್ಬಳ್ಳಿ: ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಪ್ರವೇಶ ಕೊಡಿಸುವುದಾಗಿ 8.85 ಲಕ್ಷ ವಂಚನೆ ಮಾಡಿದ ಪ್ರಕರಣ ಅಸ್ಸೋಂ ರಾಜ್ಯದ ಕೊಕ್ರಝಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸದ್ಯ ಕೇಸ್​​​ ವಿಚಾರಣೆಗಾಗಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದೆ.

ಅಸ್ಸೋಂ ರಾಜ್ಯದ ಸುರೇಶ್​​​​ ಗೋವಿಂದರಾಜ ಯೆರಮಶೆಟ್ಟಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಹುಬ್ಬಳ್ಳಿಯ ರೋಹಿತ್‌ ಕುಮಾರ ಕಲಾಸ್ಕರ್ ಎಂಬುವವರು ದೂರು ದಾಖಲಿಸಿದ್ದಾರೆ.

2017ರ ಮಾರ್ಚ್ ತಿಂಗಳಲ್ಲಿ ಥಾಯ್ಲೆಂಡ್​ ವಿಶ್ವವಿದ್ಯಾನಿಲಯ ಆಧಾರಿತ ನಾಲ್ಕು ವರ್ಷಗಳ ವ್ಯಾಸಂಗಕ್ಕಾಗಿ ಯುನಿರ್ವಸಿಟಿ / ಇಂಟರ್​​​​ನ್ಯಾಶನಲ್ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸುತ್ತೇನೆ ಎಂದು ನಂಬಿಸಿ 8.85 ಲಕ್ಷ ರೂ. ಹಣ ಪಡೆದು ಪ್ರವೇಶ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ