Breaking News

ಗಂಡ ವಿದೇಶದಲ್ಲಿ, ಹೆಂಡತಿ ಸ್ವದೇಶದಲ್ಲಿ

Spread the love

ಲಾಕ್​ಡೌನ್ ಸಮಯದಲ್ಲಿ ಗಂಡ-ಹೆಂಡತಿ ಒಂದೇ ಮನೆಯಲ್ಲಿ ಜತೆಗಿದ್ದಾಗ ಏನೆಲ್ಲಾ ಆಗುತ್ತದೆ ಎಂದು ‘ಇಕ್ಕಟ್’ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದರು ನಾಗಭೂಷಣ್. ಅವರು ಈಗ ಲಾಕ್​ಡೌನ್ ಕುರಿತು ಇನ್ನೊಂದು ಸಿನಿಮಾ ಮಾಡಿದ್ದಾರೆ. ವ್ಯತ್ಯಾಸ ಏನೆಂದರೆ, ಲಾಕ್​ಡೌನ್​ನಲ್ಲಿ ಗಂಡ ವಿದೇಶದಲ್ಲಿರುತ್ತಾನೆ, ಹೆಂಡತಿ ಸ್ವದೇಶದಲ್ಲಿರುತ್ತಾಳೆ … ಅವರಿಬ್ಬರ ನಡುವಿನ ಪ್ರೀತಿ-ಗೀತಿ-ಇತ್ಯಾದಿಯ ಬಗ್ಗೆ ಈ ಚಿತ್ರ ಸುತ್ತುತ್ತದೆ.

ಅದೇ ‘ಮೇಡ್ ಇನ್ ಚೈನಾ’.

ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಅಭಿನಯದಲ್ಲಿ ಛಾಯಾಗ್ರಾಹಕ ಪ್ರೀತಂ ತೆಗ್ಗಿನಮನೆ ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಕೇಳಿಬಂದಿತ್ತು. ಆ ಚಿತ್ರಕ್ಕೆ ‘ಮೇಡ್ ಇನ್ ಚೈನಾ’ ಎಂದು ಹೆಸರಿಡಲಾಗಿರುವುದಷ್ಟೇ ಅಲ್ಲ, ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ‘ಮೇಡ್ ಇನ್ ಚೈನಾ’, ಕನ್ನಡದ ಮೊದಲ ವರ್ಚುವಲ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದರೆ, ವಿಡಿಯೋ ಕಾಲ್ ಮೂಲಕವೇ ಪಾತ್ರಧಾರಿಗಳ ಮಾತುಕತೆ ನಡೆಯುತ್ತದೆ.

ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ನಾಗಭೂಷಣ್ ಮತ್ತು ಪ್ರಿಯಾಂಕಾ ಜತೆಗೆ ಗೌರವ್ ಶೆಟ್ಟಿ, ಅರುಣಾ ಬಾಲರಾಜ್, ರವಿ ಭಟ್ ನಟಿಸಿದ್ದಾರೆ. ಪ್ರೀತಂ ತೆಗ್ಗಿನಮನೆ ಈ ಚಿತ್ರದ ನಿರ್ದೇಶನ, ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವುದಷ್ಟೇ ಅಲ್ಲ, ನಿಶ್ಚಲ್ ವಿ ಜತೆಗೆ ಸೇರಿ ಕಥೆ-ಚಿತ್ರಕಥೆಯನ್ನೂ ರಚಿಸಿದ್ದಾರೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್​ನಲ್ಲಿ ನಂದಕಿಶೋರ್ ಈ ಚಿತ್ರ ನಿರ್ವಿುಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ