Home / ರಾಜಕೀಯ / ಅಕ್ರಮ ಚಟುವಟಿಕೆಗಳಲ್ಲಿ ಒಂದಾದ ಇಸ್ಪಿಟ್ ಆಟಕ್ಕೆ ಸಾಪ್ಟ್ ವೇರ್ ಲಗ್ಗೆ ಇಟ್ಟಿದೆ.

ಅಕ್ರಮ ಚಟುವಟಿಕೆಗಳಲ್ಲಿ ಒಂದಾದ ಇಸ್ಪಿಟ್ ಆಟಕ್ಕೆ ಸಾಪ್ಟ್ ವೇರ್ ಲಗ್ಗೆ ಇಟ್ಟಿದೆ.

Spread the love

ಬೆಂಗಳೂರು: ಅಕ್ರಮ ಚಟುವಟಿಕೆಗಳಲ್ಲಿ ಒಂದಾದ ಇಸ್ಪಿಟ್ ಆಟಕ್ಕೆ ಸಾಪ್ಟ್ ವೇರ್ ಲಗ್ಗೆ ಇಟ್ಟಿದೆ.

ಅಂದರ್-ಬಾಹರ್ ಕಾರ್ಡ್ ಗೇಮ್‍ಗೂ ಡಿವೈಸ್ ಬಂದಿದೆ. ಡಿವೈಸ್ ಮೂಲಕ ಅಂದರ್ ಬಾಹರ್ ಗೇಮ್ ಟ್ರ್ಯಾಪ್ ಮಾಡಿ ಎದುರಾಳಿಗಳನ್ನು ಪಾಪರ್ ಮಾಡಿ ಆರೋಪಿಗಳು ಬರಿಗೈಯ್ಯಲ್ಲಿ ಕಳುಹಿಸುತ್ತಿದ್ದರು. ಅಂದರ್ ಬಾಹರ್ ಗೇಮ್ ಡೀಲ್ ಮಾಡುವುದಕ್ಕೆ CVK 600 ಡಿವೈಸ್ ಮೂಲಕ ಟ್ರ್ಯಾಪ್ ಮಾಡಲಾಗುತ್ತದೆ. ಸ್ಮಾರ್ಟ್ ಫೋನ್ ರೀತಿಯಲ್ಲೇ ಸಿಗುವ CVK 600 ಡಿವೈಸ್ ಇದಾಗಿದ್ದು, ಅಂದರ್ ಬಾಹರ್ ಗೇಮ್ ಅಡ್ಡಕ್ಕೆ ಡಿವೈಸ್ ಕೊಂಡೊಯ್ದು ಇಡೀ ಗೇಮ್ ಟ್ರ್ಯಾಪ್ ಮಾಡುತ್ತಿದ್ದರು. ಜೂಜು ಆಟವನ್ನು ಡೀಲ್ ಮಾಡಲು ಆರೋಪಿಗಳು ಚೀನಾದಿಂದ ಕಾರ್ಡ್ ತರಿಸಿಕೊಳ್ಳುತ್ತಿದ್ದರು.

 

ಇದೀಗ ಸಾಪ್ಟ್ ವೇರ್ ಬಳಸಿ ಅಂದರ್ ಬಾಹರ್ ಡೀಲ್ ನಡೆಸುತ್ತಿದ್ದ ಫರ್ದಿನ್ ಎಂಬ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಫಿನ್ ಪರಿಂದರ್ ಸಿಂಗ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ