Breaking News

ಪ್ರಿಯಾಂಕಾ ಗಾಂಧಿಯನ್ನು ‘ಅಕ್ಕ’ ಎನ್ನುತ್ತಿದ್ದ ನಿದಾ ಖಾನ್‌ ಬಿಜೆಪಿಗೆ!

Spread the love

ಲಖನೌ: ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ. ಅದರಲ್ಲಿಯೂ ಸದ್ಯ ಎಲ್ಲರ ಗಮನ ಸೆಳೆದಿರುವುದು ಉತ್ತರ ಪ್ರದೇಶ. ಇಲ್ಲಿಯ ರಾಜಕೀಯ ವಲಯದಲ್ಲಿ ಇದೀಗ ಭಾರಿ ಕುತೂಹಲದ ಬೆಳವಣಿಗೆ ನಡೆದಿದ್ದು, ತ್ರಿವಳಿ ತಲಾಖ್‌ ಸಂತ್ರಸ್ತೆ ನಿದಾ ಖಾನ್‌ ಬಿಜೆಪಿ ಸೇರಿದ್ದಾರೆ.

ಇತ್ತಿಹಾದ್-ಎ-ಮಿತಾತ್ ಮಂಡಳಿಯ ಮುಖ್ಯಸ್ಥ ಮೌಲಾನಾ ತೌಖೀರ್ ರಾಜಾ ಖಾನ್ ಅವರ ಸೊಸೆಯಾಗಿರುವ ನಿದಾ ಬಿಜೆಪಿಯನ್ನು ಸೇರುವ ಮೂಲಕ ಕಾಂಗ್ರೆಸ್‌ಗೂ ಶಾಕ್ ಕೊಟ್ಟಿದ್ದಾರೆ.

ಸಮಾಜ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್​ರ ಸೊಸೆ ಅಪರ್ಣಾ ಯಾದವ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ನಿದಾ ಖಾನ್ ಸಹ ಬಿಜೆಪಿಗೆ ಸೇರಿರುವುದು ಬಹಳ ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ