Breaking News

ಕಂಡಕಂಡಲ್ಲಿ ಮೂತ್ರ ಮಾಡುವವರಿಗೆ500 ರೂಪಾಯಿ ದಂಡ

Spread the love

ಬೆಂಗಳೂರು, ಆ.25- ಎಚ್ಚರ ಇನ್ನು ಮುಂದೆ ಶೌಚಾಲಯದಲ್ಲಿ ಮೂತ್ರ ಮಾಡಿ, ತುರ್ತು ಎಂದು ಎಲ್ಲೆಂದರಲ್ಲಿ ನಿಂತು ಮೂತ್ರ ಮಾಡಿದರೆ ದಂಡ ಬೀಳಲಿದೆ.

ಈವರೆಗೂ ಬೇಕಾಬಿಟ್ಟಿ ಕಸ ಎಸೆಯುವವರನ್ನು ಹಿಡಿದು ದಂಡ ಹಾಕಲಾಗುತ್ತಿತ್ತು. ಕೊರೊನಾ ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲಿ ಮಾಸ್ಕ್ ಧರಿಸದವರ, ಎಲ್ಲೆಂದರಲ್ಲಿ ಉಗುಳುವವರ ವಿರುದ್ಧ ಬಿಬಿಎಂಪಿ ಮಾರ್ಷಲ್‍ಗಳು ದಂಡ ವಿಸುತ್ತಿದ್ದರು

ಇದೇ ಮೊದಲ ಬಾರಿಗೆ ಬೀದಿ ಬದಿಯಲ್ಲಿ ನಿಂತು ಮೂತ್ರ ಮಾಡುವವರಿಗೂ ದಂಡ ಹಾಕಿದ್ದಾರೆ. ವಾರ್ಡ್ ನಂಬರ್ 176ರ ಶಾಖಾಂಬರಿ ನಗರದಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಪುಟ್ಪಾತ್ ಮೇಲೆ ನಿಂತು ಮೂತ್ರ ಮಾಡುತ್ತಿದ್ದ ಅಯ್ಯಪ್ಪ ಎಂಬುವರಿಗೆ 500 ರೂಪಾಯಿ ದಂಡ ವಿಸಲಾಗಿದೆ.

ಸಾರ್ವಜನಿಕ ಸ್ಥಳವನ್ನು ಕೊಳಕು ಮಾಡುತ್ತಿದ್ದಕ್ಕಾಗಿ ದಂಡ ವಿಸುತ್ತಿರುವುದಾಗಿ ನಮೂದಿಸಲಾಗಿದೆ. ಇತ್ತೀಚೆಗೆ ಸ್ವಚ್ಛತಾ ರೇಟಿಂಗ್‍ನಲ್ಲಿ ಬೆಂಗಳೂರು 11ನೆ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ ಮತ್ತಷ್ಟು ರೊಚ್ಚಿಗೆದ್ದಂತೆ ಕಾಣುತ್ತಿರುವ ಬಿಬಿಎಂಪಿ ಅಕಾರಿಗಳು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ