Breaking News

ಹೊಸ ವರ್ಷಾರಂಭದಲ್ಲೇ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಅನುಶ್ರೀ

Spread the love

ಬೆಂಗಳೂರು: ಆಂಕರ್ ಅನುಶ್ರೀ ಕೇವಲ ಕಿರುತೆರೆ ಮಾತ್ರವಲ್ಲ, ಹಿರಿತೆರೆಯಲ್ಲೂ ಈಗಾಗಲೇ ಅಭಿನಯಿಸಿ ಸೈ ಎನಿಸಿಕೊಂಡವರು.
ಇದೀಗ ಹೊಸ ವರ್ಷಾರಂಭದಲ್ಲೇ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಅನುಶ್ರೀ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇದರ ಸ್ಪ್ರಿಪ್ಟ್ ಪೂಜೆ ನೆರವೇರಿದೆ. ಈ ಸಂತೋಷದ ವಿಚಾರ ಹಂಚಿಕೊಂಡಿರುವ ಅನುಶ್ರೀ ಸದ್ಯದಲ್ಲೇ ಚಿತ್ರದ ಟೈಟಲ್ ಘೋಷಣೆಯಾಗಲಿದೆ ಎಂದಿದ್ದಾರೆ.

ಲೋಹಿತ್ ಎಚ್ ಪ್ರೊಡಕ್ಷನ್ಸ್ ಮತ್ತು ಎಸ್‌ಎಂಪಿ ಪ್ರೊಡಕ್ಷನ್ಸ್ ಅರ್ಪಿಸಿ ಪಾರ್ಥಿಬನ್ ನಿರ್ಮಿಸುತ್ತಿರುವ ಪ್ರಭಾಕರ್ ನಿರ್ದೇಶನದ ಹಾರರ್ ಕಥಾ ಹಂದರದ ಸಿನಿಮಾ ಇದಾಗಿದೆ. ಇದರಲ್ಲಿ ಅನುಶ್ರೀ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದ ಮಾಹಿತಿ ಸದ್ಯದಲ್ಲೇ ನಿಮಗೆ ಸಿಗಲಿದೆ ಎಂದಿದ್ದಾರೆ ಅನುಶ್ರೀ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ