Breaking News
Home / ಜಿಲ್ಲೆ / ಬೆಂಗಳೂರು / ಬೇರೆ ರಾಜ್ಯಗಳಿಂದ ಬರೋ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಬೇರೆ ರಾಜ್ಯಗಳಿಂದ ಬರೋ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

Spread the love

ಬೆಂಗಳೂರು: ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಬರೋ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸರಕುಗಳ ಅಂತರ-ರಾಜ್ಯ ಚಲನೆಗೆ ಯಾವುದೇ ನಿರ್ಬಂಧಗಳಿರುವದಿಲ್ಲ.

ಅಂತರ-ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಎಲ್ಲ ಸುತ್ತೋಲೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಣಿ, ಗಡಿ ಭಾಗಗಳಲ್ಲಿ ವೈದ್ಯಕೀಯ ತಪಾಸಣೆ, ಜಿಲ್ಲೆಗಳಲ್ಲಿ ತಪಾಸಣೆ, ಪ್ರಯಾಣಿಕರ ವರ್ಗೀಕರಣ, ಕೈಗಳ ಮೇಲೆ ಮುದ್ರೆ, ಮನೆ ಬಾಗಿಲುಗಳಿಗೆ ಪೋಸ್ಟರ್ ಹಚ್ಚುವಿಕೆ ಈ ಎಲ್ಲ ಷರತ್ತುಗಳನ್ನು ರದ್ದುಗೊಳಿಸಲಾಗಿದೆ.

ಪ್ರಯಾಣಿಕರಿಗೆ ಸರ್ಕಾರ ನೀಡಿರುವ ಸೂಚನೆಗಳು
1. ರಾಜ್ಯಕ್ಕೆ ಬರುವ ವೇಳೆ ಕೋವಿಡ್ ಲಕ್ಷಣಗಳು ಇಲ್ಲದಿದ್ರೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ ಮತ್ತು ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ರಾಜ್ಯಕ್ಕೆ ಬಂದ 14 ದಿನಗೊಳಗಾಗಿ ಕೋವಿಡ್-19 ಲಕ್ಷಣಗಳ ಕಂಡು ಬಂದಲ್ಲಿ ಸ್ವಯಂ ನಿಗಾ ವಹಿಸುವುದು. ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು.

2. ರಾಜ್ಯಕ್ಕೆ ಆಗಮಿಸುವ ವೇಳೆ ಕೋವಿಡ್-19 ಲಕ್ಷಣಗಳಿದ್ರೆ ತಕ್ಷಣವೇ ಸ್ವಯಂ ಪ್ರತ್ಯೇಕವಾಗಿರುವುದು. ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯುವುದು ಮತ್ತು ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು.

3. ಕೋವಿಡ್ 19 ತಡೆಗಟ್ಟಲು ಫೇಸ್ ಮಾಸ್ಕ್ ಧರಿಸುವುದು. 2 ಮೀಟರ್ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಆಗಾಗ್ಗೆ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕಲೆ ಸೇರಿದಂತೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು.

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ