Breaking News

ಡಾಕ್ಟರ್ ನಿವೇದಿತಾ ಮತ್ತು ಡಾಕ್ಟರ್ ಸವಿತಾ ಅವರು ಹಾಸನ ರಕ್ತನಿಧಿಗೆ ಬಂದು ಬಿ – ನೆಗೆಟಿವ್ ರಕ್ತವನ್ನು ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿದ್ದಾರೆ .

Spread the love

ಹಾಸನ: ಇಂದು ಹಾಸನದ ಎಸ್.ಡಿ.ಎಂ.ಎ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಂಕ್ರಪ್ಪ ಎಂಬುವರಿಗೆ ರಕ್ತದ ಅಂಶ ಕಡಿಮೆ ಇರುವ ಕಾರಣ ಬಿ – ನೆಗೆಟಿವ್ ರಕ್ತ ಅವಶ್ಯಕತೆ ಇದೆ ಎಂದು ಹಾಸನದಲ್ಲಿ ಇರುವ ಎಲ್ಲಾ ರಕ್ತ ನಿಧಿಗಳಿಗೆ ಭೇಟಿ ನೀಡಿದರು ಕೂಡ ಬಿ – ನೆಗೆಟಿವ್ ರಕ್ತ ದೊರೆಯಲಿಲ್ಲ.

ಹಾಗೂ ಶಂಕ್ರಪ್ಪ ಅವರು ಬೆಂಗಳೂರಿನವರಾಗಿದ್ದಾರೆ ಅವರ ಸಂಬಂಧಿಕರು ಕೂಡ ಬೇಗ ಮುಂದೆ ಬರಲು ಆಗದ ಕಾರಣ , ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ಸ್ . ಶಂಕ್ರಪ್ಪ ಅವರ ಕಷ್ಟವನ್ನು ಆಲಿಸಿ ಡಾಕ್ಟರ್ ನಿವೇದಿತಾ ಮತ್ತು ಡಾಕ್ಟರ್ ಸವಿತಾ ಅವರು ಹಾಸನ ರಕ್ತನಿಧಿಗೆ ಬಂದು ಬಿ – ನೆಗೆಟಿವ್ ರಕ್ತವನ್ನು ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿದ್ದಾರೆ .

ಅವರಿಗೆ ಹಾಸನ ಸೀಮೆಯವರು ಹಾಗೂ ನನ್ನ ವೈಯಕ್ತಿಕ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಮೇಡಂ.

ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಯಾವುದೇ ರೀತಿಯ ರಕ್ತದಾನ ಶಿಬಿರಗಳು ನಡೆಯದ ಕಾರಣ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುವ ಕಾರಣ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ


Spread the love

About Laxminews 24x7

Check Also

ಡಿಸಿ, ತಾ.ಪಂ. ಇಓ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಹೆಚ್.ಡಿ.ರೇವಣ್ಣ

Spread the loveಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ವಿರುದ್ಧ ಮಾಜಿಸಚಿವ ಹೆಚ್.ಡಿ.ರೇವಣ್ಣ  ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ