Breaking News

ಹಿರೇಬಾಗೇವಾಡಿ ಬ್ಯಾಂಕ್ ಆಫ್ ಇಂಡಿಯಾಗೆ ಖದೀಮರ ಕನ್ನ:

Spread the love

ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸುವರ್ಣಸೌಧ ಸಮೀಪದಲ್ಲಿಯೇ ಇರುವ ಹಿರೇಬಾಗೇವಾಡಿ ಗ್ರಾಮದ ಪ್ರತಿಷ್ಠಿತ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗೆ ನಿನ್ನೆ ರಾತ್ರಿ ಖದೀಮರು ಕನ್ನ ಹಾಕಿದ್ದು. ಕಳ್ಳತನ ವಿಫಲಯತ್ನವಾಗಿದೆ.

ಬ್ಯಾಂಕಿನ ಮುಂಬದಿಯ ಬಾಗಿಲನ್ನು ತೆರೆಯದೆ ಹಿಂಭಾಗದ ಬಾಗಿಲ ಮೂಲಕ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಬ್ಯಾಂಕ್‍ನ ಹಿಂಬಾಗಿಲ ಮೂಲಕ ನುಗ್ಗಿರುವ ಕಳ್ಳರು ಗ್ಯಾಸ್ ಕಟರ್ ಮೂಲಕ ಹಣ ತುಂಬುವ ಯಂತ್ರವನ್ನು ಎಟಿಎಂ ಮಷಿನ್ ಎಂದು ತಿಳಿದು ಕತ್ತರಿಸಿ; ಕ್ಯಾಮೆರಾ ವೈರ್‍ಗಳನ್ನು ಕಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆದಿದೆ ಎಂದು ಹಿರೇಬಾಗೇವಾಡಿ ಠಾಣೆ ಸಿಪಿಐ ವಿಜಯಕುಮಾರ್ ಸಿನ್ನೂರ ಮಾಹಿತಿ ನೀಡಿದ್ದಾರೆ.

ಕಳ್ಳತನ ಆಗಿರುವ ಹಿನ್ನೆಲೆ ಸೋಮವಾರ ಇಡೀ ದಿನ ಬ್ಯಾಂಕ್ ತೆರೆದಿಲ್ಲ. ಈ ಬಗ್ಗೆ ಗ್ರಾಹಕರು ಬ್ಯಾಂಕು ಹಾಗೂ ಪೆÇಲೀಸರಿಗೆ ವಿಷಯ ತಿಳಿಸಿ ಸತ್ಯಾಂಶ ಏನಾಯ್ತು ಎಂದು ತಿಳಿಸುವಂತೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಯಾರೂ ಕೂಡ ತುಟಿ ಪಿಟಕ್ ಎನ್ನುತ್ತಿಲ್ಲವಂತೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದು, ತಾವು ಇಟ್ಟಿದ್ದ ಹಣ, ಚಿನ್ನಾಭರಣದ ಗತಿ ಏನು ಎಂದು ಪ್ರಶ್ನಿಸುತ್ತಿದ್ದಾರೆ.

ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರಿಗೆ ಬೀಸಿದ್ದು. ಕಳ್ಳತನ ಘಟನೆಯಿಂದ ಹಿರೇಬಾಗೇವಾಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭೀತಿಗೆ ಒಳಗಾಗಿದ್ದಾರೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ