Breaking News

ಫಡಣವೀಸ್‌ ವಾಸ್ತವ್ಯವಿದ್ದ ಹೋಟೆಲ್‌ಗೆ ಕಾಂಗ್ರೆಸ್‌ ನಾಯಕ ಭೇಟಿ, ಕುತೂಹಲ

Spread the love

ಪಣಜಿ: ಗೋವಾದ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡಣವೀಸ್ ಅವರು ವಾಸ್ತವ್ಯವಿದ್ದ ಹೋಟೆಲ್‌ಗೆ ಗೋವಾ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷರು ಸೋಮವಾರ ಮಧ್ಯರಾತ್ರಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಗೋವಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆದಿರುವ ಹೊತ್ತಿನಲ್ಲಿಯೇ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೊರೆಂಕೊ ಅವರು ಭೇಟಿ ನೀಡಿದ್ದಾರೆ.

ಈ ಭೇಟಿ ಕುರಿತಂತೆ ಹೋಟೆಲ್‌ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಚರ್ಚಿಸಲು ಅವರು ನಿರಾಕರಿಸಿದ್ದರು.

ಗೋವಾ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಿರೀಶ್‌ ಚೋಡಂಕರ್ ಅವರು, ಬಿಜೆಪಿ ಮುಖಂಡರ ಭೇಟಿಗೆ ಲೊರೆಂಕೊ ತೆರಳಿರಲಿಲ್ಲ. ಅಲ್ಲಿ, ಚುನಾವಣಾ ಕಾರ್ಯತಂತ್ರ ಚರ್ಚೆಗೆ ಸಭೆ ಇತ್ತು. ನಾನು ಹೋಗಲು ಆಗಿರಲಿಲ್ಲ, ಅವರನ್ನು ಕಳುಹಿಸಿದ್ದೆ’ ಎಂದಿದ್ದಾರೆ.

ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಲೊರೆಂಕೊ ಅವರು, ‘ಚುನಾವಣಾ ಕಾರ್ಯತಂತ್ರ ಕುರಿತ ಸಭೆಗಾಗಿ ಆ ಹೋಟೆಲ್‌ಗೆ ತೆರಳಿದ್ದೆ. ಆದರೆ, ಅದೇ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರು ಇರುವುದು ತಿಳಿದ ಕೂಡಲೇ ನಿರ್ಗಮಿಸಿದ್ದೆ’ ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ