Breaking News

ಸತೀಶ ಜಾರಕಿಹೊಳಿ ಜಾಣ: ಏನು ಮಾಡಬೇಕು ಅಂತಾ ಅವರಿಗೆ ಗೊತ್ತಿದೆ,ಮಹಾಂತೇಶ ಕವಟಗಿಮಠ ಗೆಲ್ಲಿಸುವುದು ನಮ್ಮ ಮೊದಲ ಆಧ್ಯತೆ.

Spread the love

ಬಿಜೆಪಿ ಪಕ್ಷದ ಮೊದಲ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಿಸುವುದು ನಮ್ಮ ಮೊದಲ ಆಧ್ಯತೆ. ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಪುನರುಚ್ಚರಿಸಿದ್ದಾರೆ.

ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ರಮೇಶ ಜಾರಕಿಹೊಳಿ ಬಿಜೆಪಿ ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕೆ ಇಳಿಸುತ್ತಿದ್ದೇವೆ. ಎರಡನೇ ಅಭ್ಯರ್ಥಿ ಬೇಡ ಎಂದು ನಾನು ಮನವಿ ಮಾಡಿಕೊಂಡಿದ್ದೇನೆ. ಒಂದನೇ ಮತ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ, ಎರಡನೇ ಮತ ಕಾಂಗ್ರೆಸ್ ಸೋಲಿಸಲು ಹಾಕೋದು. ಲಖನ್ ಜಾರಕಿಹೊಳಿ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಇನ್ನು ಕಾಂಗ್ರೆಸ್‍ನಿಂದ ವಿವೇಕರಾವ್ ಪಾಟೀಲ್‍ಗೆ ಅನ್ಯಾಯ ಆಗಿದೆ. ವಿವೇಕರಾವ್ ಪಾಟೀಲ್ ಭೇಟಿಯಾಗಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.ಪರಿಷತ್ ಚುನಾವಣೆ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ರಮೇಶ ಜಾರಕಿಹೊಳಿ ಹಿಂದೆ ನಾನು ಉಸ್ತುವಾರಿ ಸಚಿವನಾಗಿದ್ದ ಹಿನ್ನೆಲೆ ನನ್ನ ನೇತೃತ್ವದಲ್ಲಿ ಗೆಲ್ಲೋದು ಏನು ದೊಡ್ಡ ಮಾತಲ್ಲ. ಆದರೆ ನನ್ನ ಉಪಯೋಗ ಮಾಡಿಕೊಂಡು. ಒಂದು ಗಂಟೆಯಲ್ಲಿ ಬದಲಾವಣೆ ಆಯಿತು. ನಂತರ ಅದು ಬೆಂಗಳೂರು ನೇತೃತ್ವ ಆಯಿತು. ಈಗಲೂ ಸತೀಶ ಜಾರಕಿಹೊಳಿ ತಗೊಂಡು ಮತ್ತೆ ಬೆಂಗಳೂರು ನೇತೃತ್ವ ಆಗಲು ನಾವು ಬಿಡೋದಿಲ್ಲ. ಈ ಬಾರಿ ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೋಲಿಸಿಯೇ ಸೋಲಿಸುತ್ತೇವೆ. ಇನ್ನು ಸತೀಶ ಜಾರಕಿಹೊಳಿ ಜಾಣರಿದ್ದಾರೆ. ಬಹಳಷ್ಟ ಸಲ ಎಂಎಲ್‍ಎ ಆಗಿದ್ದಾರೆ. ಎನ್ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ರಮೇಶ ಜಾರಕಿಹೊಳಿ ಟಾಂಗ್ ಕೊಟ್ಟರು.

ಬಿಜೆಪಿ ಪಕ್ಷ ರಮೇಶ ಜಾರಕಿಹೊಳಿ ಅವರನ್ನು ಕಡೆಗಣಿಸುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ರಮೇಶ ಜಾರಕಿಹೊಳಿ ಕಡೆಗಣಿಸಲಿ ಬಿಡಿ, ಕಡೆಗೆ ಕಾರ್ಯಕರ್ತರಾಗಿ, ಎಂಎಲ್‍ಎ ಆಗಿ ಇರುತ್ತೇವೆ ಅಲ್ಲ. ಈಗ ನಾನು ಹ್ಯಾಪಿ ಆಗಿ ಇದ್ದೇನೆ ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ