Home / ರಾಜಕೀಯ / ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಹ್ಯಾಕರ್​ ಶ್ರೀಕಿ ಪುರಾಣ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಹ್ಯಾಕರ್​ ಶ್ರೀಕಿ ಪುರಾಣ

Spread the love

ಬೆಂಗಳೂರು: ಹ್ಯಾಕರ್ ಶ್ರೀಕಿ ಬಂಧನದ ಬಳಿಕ ಏನೇನು ನಡೆಯಿತು ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆ ವಿವರಿಸಿದ್ದು ಹೀಗೆ…

2020 ನವೆಂಬರ್ 14ಕ್ಕೆ ಶ್ರೀಕೃಷ್ಣ ಸಿಸಿಬಿ ಮುಂದೆ ಶರಣಾಗುತ್ತಾನೆ. 3 ದಿನ ರಿಪೋರ್ಟಿಂಗ್ ಆಗುವುದೇ ಇಲ್ಲ.

17ರಂದು ಬಂಧನ ಎಂದು ತೋರಿಸುತ್ತಾರೆ, ಹ್ಯಾಕಿಂಗ್ ದೂರಿನ ಮೇರೆಗೆ 14 ದಿನ ಕಸ್ಟಡಿಗೆ ಕಳಿಸುತ್ತಾರೆ. ವಿದೇಶದಿಂದ ಹೈಡ್ರೋ ಗಾಂಜಾವನ್ನು ಬಿಟ್ ಕಾಯಿನ್ ಮೂಲಕ ತರಿಸುತ್ತಿದ್ದಾರೆಂದು ಡಿ.2ರಂದು ಮತ್ತೆ 12 ದಿನ ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಗೇಮಿಂಗ್ ವೆಬ್​ಸೈಟ್ ಹ್ಯಾಕಿಂಗ್​ಗೆ ಸಂಬಂಧಪಟ್ಟಂತೆ ಡಿ.14ರಂದು ಶ್ರೀಕಿಯನ್ನು ಮತ್ತೆ ಡಿ.28ರವರೆಗೆ ಬಂಧನದಲ್ಲಿ ಇಟ್ಟುಕೊಳ್ಳುತ್ತಾರೆ. ಈ ಸಂದರ್ಭ ಬಿಟ್ ಕಾಯಿನ್ ಪ್ರಸ್ತಾವನೆಯಾಗುತ್ತದೆ. ಹ್ಯಾಕ್ ಮಾಡಿ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿದ್ದು, ಹವಾಲಾ ಕಾರಣವನ್ನು ಕೊಟ್ಟು ಪೊಲೀಸರು ಮತ್ತೆ 14 ದಿನ ವಶಕ್ಕೆ ತೆಗೆದುಕೊಳ್ಳುತ್ತಾರೆ. ಕಸ್ಟಡಿ ಕೊನೆಯಾಗುತ್ತಿದ್ದಂತೆ ಮತ್ತೊಂದು ಹೊಸ ಕೇಸು ಹಾಕುತ್ತಾರೆ.

2021 ಜನವರಿ 8ರ ಮೊದಲ ಪಂಚನಾಮೆ ವರದಿಯಲ್ಲಿ ಶ್ರೀಕಿಯಿಂದ 9 ಕೋಟಿ ಮೌಲ್ಯದ 31.8 ಬಿಟ್ ಕಾಯಿನ್ ಸೆಫ್ ಕಸ್ಟಡಿಗೆ ತೆಗೆದುಕೊಳ್ಳಬೇಕೆಂದರೆ ಪಾಸ್​ವರ್ಡ್ ಬದಲಿಸಬೇಕು. ಹೀಗಾಗಿ ಸಾಕ್ಷಿಗಾಗಿ ಲೈನ್​ವ್ಯಾನ್ ಹಾಗೂ ಪವರ್ ಮ್ಯಾನ್​ಗೆ ಕರೆಸುತ್ತಾರೆ. ಪಾಸ್​ವರ್ಡ್ ಬದಲಿಸಲು ಸೈಬರ್ ಎಕ್ಸ್​ಪರ್ಟ್​ಗಳನ್ನೂ ಕರೆಸಿದ್ದಾರೆ. ಜ.11ರಂದು ಕೊರ್ಟ್​ಗೆ ಹಾಜರುಪಡಿಸುತ್ತಾರೆ. ಈ ವೇಳೆ ಶ್ರೀಕಿ ತಂದೆ ಅರ್ಜಿ ಹಾಕಿ, ನನ್ನ ಮಗ ಜೈಲಿನಲ್ಲಿದ್ದಾಗ ಪೊಲೀಸರೇ ಒತ್ತಾಯ ಮಾಡಿ ಮಾದಕ ವಸ್ತು (ಆಲ್ಪ್ರೆೋಲಮ್ ಕೊಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮ್ಯಾಜಿಸ್ಟ್ರೇಟರ್ ಪ್ರಶ್ನಿಸಿದಾಗ, ಹೌದೆಂದು ಶ್ರೀಕಿ ಒಪ್ಪಿಕೊಳ್ಳುತ್ತಾನೆ. ಹೀಗಾಗಿ ಶ್ರೀಕಿಯ ಬ್ಲಡ್, ಮೂತ್ರದ ಸ್ಯಾಂಪಲ್ ಟೆಸ್ಟ್ ಮಾಡಿಸಲು ಜಡ್ಜ್ ಸೂಚಿಸುತ್ತಾರೆ.

ಆದರೆ, ಪೊಲೀಸರು ಬೆಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೋಗಿ ಶ್ರೀಕಿ ಹೊಟ್ಟೆ ಕ್ಲೀನ್ ಮಾಡಿಸುತ್ತಾರೆ. ಜತೆಗೆ ಕೋವಿಡ್ ಆಸ್ಪತ್ರೆ ಆಗಿರುವುದರಿಂದ ಈಗ ಯೂರಿನ್-ಬ್ಲಡ್ ಟೆಸ್ಟ್ ಮಾಡಿಸುವುದಿಲ್ಲ. ವಿಧಿವಿಜ್ಞಾನ ಕೇಂದ್ರಕ್ಕೆ ಕರೆದೊಯ್ಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮತ್ತೊಂದು ಕೇಸ್ ಹಾಕಿ ಸಿಐಡಿ ಕಸ್ಟಡಿಗೆೆ ಕಳಿಸುತ್ತಾರೆ. ಮುಂದಿನ ಹಿಯರಿಂಗ್ ಬಂದಾಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ಈಗ ಕರೆತರಲು ಆಗಲ್ಲ ಎಂದು ಕೋರ್ಟ್​ಗೆ ಹೇಳುತ್ತಾರೆ, ಟೆಸ್ಟ್ ಮಾಡಿಸುವುದೇ ಇಲ್ಲ. ಜ.12ರಂದು ಶ್ರೀಕಿಯನ್ನು ಹಿಡಿದಿದ್ದೇವೆ ಎಂದು ಬೆಂಗಳೂರು ಪೊಲೀಸರು ಪತ್ರಿಕಾ ಹೇಳಿಕೆಯಲ್ಲಿ ಪ್ರಕಟಿಸುತ್ತಾರೆ.

ಜ.18ಕ್ಕೆ ಎರಡನೇ ಪಂಚನಾಮೆ ನಡೆಸಿ, 0.8 ಬಿಟ್ ಕಾಯಿನ್ ವಶಕ್ಕೆ ಪಡೆದುಕೊಳ್ಳಲು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯನ್ನು ಸಾಕ್ಷಿಗಾಗಿ ಕರೆತರುತ್ತಾರೆ. ಬಳಿಕ ಪೊಲೀಸ್ ವ್ಯಾಲೆಟ್ ಮಾಡಿಕೊಂಡು ವಶಪಡಿಸಿಕೊಂಡಿದ್ದ ಬಿಟ್​ಕಾಯಿನ್ ಹಾಕಿಕೊಳ್ಳಲು ತಜ್ಞರ ನೆರವು ಪಡೆಯುತ್ತಾರೆ. ಅಂದೇ ದೂರುದಾರ ರಾಬಿನ್ ಖಂಡೇವಾಲ್ ಸ್ಟೇಟ್​ವೆುಂಟ್ ಕೊಡುತ್ತಾರೆ, ಅದರಲ್ಲಿ ವಿವಿಧ ಉಲ್ಲೇಖಗಳಿವೆ. ಜ.22ರಂದು ಮತ್ತೊಂದು ಪಂಚನಾಮೆ ಮಾಡಿದ್ದು, ಮೊದಲ ಬಾರಿಗೆ ಶ್ರೀಕಿ ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್ ರಕ್ಷಿಸಲು ಪಾಸ್​ವರ್ಡ್ ಬದಲಿಸಿದ್ದ ಪೊಲೀಸರು, ಅದನ್ನು ವ್ಯಾಲೆಟ್​ಗೆ ಹಾಕಿಕೊಳ್ಳುವ ಉದ್ದೇಶದಿಂದ ಪರಿಶೀಲಿಸಿದಾಗ, 186.8 ಬಿಟ್ ಕಾಯಿನ್ ಕಾಣಿಸಿದೆ. ಅಷ್ಟನ್ನೂ ವರ್ಗಾಯಿಸಿಕೊಂಡಿದ್ದು ಖಾತ್ರಿ ಮಾಡಿಕೊಳ್ಳುತ್ತಾರೆ. ಆದರೆ, ಮರುಪರಿಶೀಲನೆ ನಡೆಸಿದಾಗ ಟ್ರಾನ್ಜಾಕ್ಷನ್ ಐಡಿ ಚಾಲ್ತಿಯಲ್ಲಿಲ್ಲ, ಫೇಕ್ ಎಂದು ಗೊತ್ತಾಗುತ್ತದೆ. ಎಕ್ಸ್​ಪರ್ಟ್​ಗಳಿಗೂ ಇದೇಕೆ ಹೇಗೆ ಎಂದು ಗೊತ್ತಾಗಲ್ಲ.

ಫೆ.5ರಂದು ಶ್ರೀಕಿ ತಂದೆ ರಿಟ್ ಪಿಟಿಶನ್ ಹಾಕಿ, ನನಗೆ ಈ ರಾಜ್ಯ ಸರ್ಕಾರದ ಮೇಲೆ ಭರವಸೆ ಇಲ್ಲ. ದಯವಿಟ್ಟು ವಿಶೇಷ ತನಿಖೆ ಆಗಲಿ, ಕೋರ್ಟ್ ಉಸ್ತುವಾರಿಯಲ್ಲಿ ನಡೆಯಲಿ. ಜತೆಗೆ ನಿಮಾನ್ಸ್ ನಿರ್ದೇಶಕರ ಮೂಲಕ ಡ್ರಗ್ಸ್ ಟೆಸ್ಟ್ ಮಾಡಿಸಿ, ತನಿಖಾಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ಆಗಬೇಕೆಂದು ಕೋರುತ್ತಾರೆ. ಫೆ.15ರಲ್ಲಿ ಜಾರಿ ನಿರ್ದೇಶನಾಲಯವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಬಿಟ್ ಕಾಯಿನ್ ಬಗ್ಗೆ ಮಾಹಿತಿ ಕೇಳುತ್ತದೆ. ಸರ್ಕಾರ 20 ದಿನಗಳ ಬಳಿಕ ಉತ್ತರ ನೀಡುತ್ತದೆ ಮತ್ತು 31.8 ಬಿಟ್ ಕಾಯಿನ್ ಬಗ್ಗೆ ಮಾತ್ರ ಮಾಹಿತಿ ಕೊಡುತ್ತಾರೆ. ಏ.24ರಂದು ಆಯುಕ್ತರು ಇಂಟರ್​ಪೋಲ್​ಗೆ ಪತ್ರ ಬರೆದು, ಶ್ರೀಕಿ ಕುರಿತು ವರದಿ ನೀಡಿದ್ದಾರೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆಲ್ಲ ಆಗುತ್ತಿದೆ, ಮಾಹಿತಿ ಕೊಡಿ, ತನಿಖೆಗೆ ಸಹಾಯ ಮಾಡಿ ಎಂದು ಕೋರುತ್ತಾರೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ