Home / ರಾಜ್ಯ / ಬಡವಾಯಿತು ಚಂದನವನ, ರಾಜಕುಮಾರ್ ನಿಲ್ಲದ ಅರಮನೆ ..

ಬಡವಾಯಿತು ಚಂದನವನ, ರಾಜಕುಮಾರ್ ನಿಲ್ಲದ ಅರಮನೆ ..

Spread the love

ಬೆಂಗಳೂರು : ಕಳೆದ ಶುಕ್ರವಾರದಂದು ಹೃದಯಾಘಾತಕ್ಕೆ ಒಳಗಾಗಿ ನಟ ಪುನೀತ್ ರಾಜ್ ಕುಮಾರ್ ( Actor Puneet Rajkumar ) ವಿಧಿವಶರಾಗಿದ್ದಾರೆ.

ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು, ಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡೀಯೋದಲ್ಲಿ ನೆರವೇರಿಸಲಾಗಿದೆ.

ಚಂದನವನದ ರಾಜಕುಮಾರನನ್ನು ಕಳೆದುಕೊಂಡ ಇಡೀ ಕರುನಾಡು ( karnataka ) ಕಂಬನಿಯಲ್ಲಿ ಮುಳುಗಿದೆ. ಪುನೀತ್ ಅಂತ್ಯಸಂಸ್ಕಾರ ನಡೆದರೂ ಕೂಡ ಪುನೀತ್ ( Puneetha rajkumar) ಸಾವನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಸದ್ಯ ರಾಜಕುಮಾರನ ನಿವಾಸದಲ್ಲಿ ಪುನೀತ್ ಫೋಟೋ ವೈರಲ್ ಆಗಿದೆ.

ಹೌದು, ದೊಡ್ಮನೆ ಕುಡಿ ನಟ ಪುನೀತ್​ ರಾಜ್​ಕುಮಾರ್​ ಅವರು ಸದಾಶಿವ ನಗರದ ( sadashiva nagara) ಮನೆಯಲ್ಲಿ ವಾಸವಾಗಿದ್ದರು.. ಈ ಮನೆಯಲ್ಲಿ ಪುನೀತ್​ ಖುಷಿ ಖುಷಿಯಿಂದ ನಗುತ್ತಾ ಬಾಳಿ ಬದುಕುತ್ತಿದ್ದರು. ಆದರೆ ವಿಧಿ ಲಿಖಿತ ಅವರು ಆ ಮನೆಯಲ್ಲಿ ಫೋಟೋವಾಗಿ, ಗೋಡೆಯ ಮೇಲಿದ್ದಾರೆ. ಈ ಚಿತ್ರ ಸೋಶಿಯಲ್​ ಮೀಡಿಯಾದಲ್ಲಿ ( social media) ಸಾಕಷ್ಟು ವೈರಲ್​ ಆಗುತ್ತಿದೆ.

ಪುನೀತ್ ನಿವಾಸದಲ್ಲಿ ಗೋಡೆಯ ಮೇಲೆ ಅಪ್ಪು ( appu photo) ಫೋಟೋ ಹಾಕಲಾಗಿದ್ದು, . ಅದರ ಹಿಂಭಾಗದಲ್ಲಿ ರಾಜ್​ಕುಮಾರ್​ ಹಾಗೂ ಪಾರ್ವತಮ್ಮ( raj and parvathamma) ಅವರ ಫೋಟೋಗಳು ಇವೆ. ಪುನೀತ್​ ಫೋಟೋಗೆ ಹೂವಿನ ಹಾರ ಹಾಕಲಾಗಿದೆ. ಇದನ್ನು ನೋಡಿದ ಅನೇಕರು ಪುನೀತ್​ ಅವರನ್ನು ಈ ರೀತಿ ನೋಡೋಕೆ ಸಾಧ್ಯವೇ ಇಲ್ಲಎಂದು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಚಂದನವನದ ( sandalwood ) ರಾಜಕುಮಾರನ ನಿವಾಸ ಬರಿದಾಗಿದ್ದು, ದೊಡ್ಮನೆ ಕುಡಿಯನ್ನು ಕಳೆದುಕೊಂಡ ರಾಜ್ ಕುಟುಂಬ , ನೆಚ್ಚಿನ ನಟನನ್ನು ಕಳೆದುಕೊಂಡ ಅಪಾರ ಅಭಿಮಾನಿ ( Fans ) ಬಳಗ ಕಂಬನಿ ಮಿಡಿಯುತ್ತಿದೆ..ಮತ್ತೆ ಹುಟ್ಟಿ ಬನ್ನಿ ಅಪ್ಪು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ