Breaking News
Home / Uncategorized / ಅಕ್ಕಿನೇನಿ ನಾಗಾರ್ಜುನಗೆ ಕಿಸ್ ಮಾಡೋಕೆ ದೊಡ್ಡ ಮೊತ್ತದ ಬೇಡಿಕೆ ಇಟ್ಟ ಅಮಲಾ ಪೌಲ್​

ಅಕ್ಕಿನೇನಿ ನಾಗಾರ್ಜುನಗೆ ಕಿಸ್ ಮಾಡೋಕೆ ದೊಡ್ಡ ಮೊತ್ತದ ಬೇಡಿಕೆ ಇಟ್ಟ ಅಮಲಾ ಪೌಲ್​

Spread the love

ಕಾಜಲ್​ ಗರ್ಭಿಣಿ ಎನ್ನುವ ಮಾತಿದೆ. ಈ ಕಾರಣಕ್ಕೆ ಅವರು ಒಂದಾದಮೇಲೆ ಒಂದು ಸಿನಿಮಾದಿಂದ ಹಿಂದೆ ಸರಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಗೋಸ್ಟ್​’ ಸಿನಿಮಾಗೆ ಗುಡ್​ಬೈ ಹೇಳಿದ್ದರು.

ಅಕ್ಕಿನೇನಿ ನಾಗಾರ್ಜುನ ವಯಸ್ಸು 60 ದಾಟಿದೆ. ಆದರೆ, ಇನ್ನೂ ಅವರು ಯಂಗ್​ ಆಗಿದ್ದಾರೆ. ತೆರೆಮೇಲೆ ಯುವ ಕಲಾವಿದರನ್ನೂ ನಾಚಿಸುವಂತೆ ನಟಿಸುತ್ತಾರೆ. ಅವರ ಸಿನಿಮಾದಲ್ಲಿ ಹೀರೋಯಿನ್​ ಆಯ್ಕೆಗೂ ಮಹತ್ವ ನೀಡಲಾಗುತ್ತದೆ. ಈಗ ‘ಗೋಸ್ಟ್​’​ ಸಿನಿಮಾದಿಂದ ಕಾಜಲ್​ ಅಗರ್​ವಾಲ್​ ಹಿಂದೆ ಸರಿದಿದ್ದಾರೆ. ಇದಕ್ಕೆ ಈಗ ಅಮಲಾ ಪೌಲ್​ ಎಂಟ್ರಿ ಆಗಿದೆ. ಈ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅವರು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಕಾಜಲ್​ ಗರ್ಭಿಣಿ ಎನ್ನುವ ಮಾತಿದೆ. ಈ ಕಾರಣಕ್ಕೆ ಅವರು ಒಂದಾದಮೇಲೆ ಒಂದು ಸಿನಿಮಾದಿಂದ ಹಿಂದೆ ಸರಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಗೋಸ್ಟ್​’ ಸಿನಿಮಾಗೆ ಗುಡ್​ಬೈ ಹೇಳಿದ್ದರು. ಈ ಕಾರಣಕ್ಕೆ ಹೊಸ ನಟಿಯ ಆಯ್ಕೆ ಚಿತ್ರತಂಡಕ್ಕೆ ಅನಿವಾರ್ಯವಾಗಿತ್ತು. ಈ ವೇಳೆ ನಿರ್ದೇಶಕ ಪ್ರವೀಣ್​ ಅವರು ಅಮಾಲಾಗೆ ಆಫರ್​ ನೀಡಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ನಾಯಕ-ನಾಯಕಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಇದನ್ನು ಹಾಡಿನ ಮೂಲಕ ತೋರಿಸೋಕೆ ನಿರ್ದೇಶಕರು ನಿರ್ಧರಿಸಿದ್ದಾರೆ. ಲಿಪ್​ ಲಾಕ್​ ಸೇರಿ ಕೆಲ ಇಂಟಿಮೇಟ್​ ದೃಶ್ಯಗಳು ಇದರಲ್ಲಿ ಇರಲಿದೆ. ಸಿನಿಮಾ ಸಂಭಾವನೆಯ ಜತೆಗೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅಮಲಾ ಹೆಚ್ಚಿನ ಹಣ ಕೇಳಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಈಗಾಗಲೇ ‘ಗೋಸ್ಟ್​’ ಸಿನಿಮಾದ ಶೂಟಿಂಗ್​ ಪ್ರಾರಂಭಗೊಂಡಿದೆ. ಅಕ್ಕಿನೇನಿ ನಾಗಾರ್ಜುನ ಅವರು ಬಿಗ್​ ಬಾಸ್​ ಸೀಸನ್​ 5ರ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಅವರು ಹೈದರಾಬಾದ್​ನಲ್ಲಿ ಈ ಚಿತ್ರದ ಶೂಟಿಂಗ್​ನಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ. ಹೀರೋಯಿನ್​ ಬದಲಾದ ಕಾರಣಕ್ಕೆ ಸಿನಿಮಾದ ಶೂಟಿಂಗ್​ ವಿಳಂಬವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಸಿನಿಮಾ ಶೂಟಿಂಗ್​ ಮುಗಿಸುವ ಆಲೋಚನೆ ಚಿತ್ರತಂಡಕ್ಕೆ ಇದೆ. ಅದಕ್ಕೆ ತಕ್ಕಂತೆಯೇ ಶೆಡ್ಯೂಲ್​ ಫಿಕ್ಸ್​ ಮಾಡಲಾಗಿದೆ.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ