Breaking News

ಡಿಕೆಎಸ್ ಕಮೀಷನ್ ಗಿರಾಕಿ’ ಹೇಳಿಕೆ: ‘ಇದು ನಿಶ್ಚಿತವಾಗಿಯೂ ಷಡ್ಯಂತ್ರ’ ಎಂದ ಸೋಮಶೇಖರ್

Spread the love

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸ್ವಪಕ್ಷಿಯರ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಎಸ್​​ಟಿ ಸೋಮಶೇಖರ್​ ಪ್ರತಿಕ್ರಿಯಿಸಿ.. ಇದು ನಿಶ್ಚಿತವಾಗಿಯೂ ಒಂದು ಷಡ್ಯಂತ್ರ. ಮೊದಲಿನಿಂದಲೂ ನಾನು ಈ ಬಗ್ಗೆ ಹೇಳುತ್ತಿದ್ದೇನೆ ಎಂದರು.

ಕಾಂಗ್ರೆಸ್​​ನಲ್ಲಿ ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ನಡೆಯುತ್ತಿದೆ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಷಡ್ಯಂತರ ನಡೆಸುತ್ತಿದ್ದಾರೆ. ಇದು ಈಗ ಮುಂದುವರಿದಿದೆ. ನನಗೆ ಪರ್ಸೆಂಟೆಜ್ ವ್ಯವಹಾರದ ಬಗ್ಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಬರೀ ಶಾಸಕನಾಗಿದ್ದೆ ಅಷ್ಟೇ ಎಂದರು.

ಮೈತ್ರಿ ಸರ್ಕಾರ ಯಾಕೆ ಬಿತ್ತು? ನಾವೆಲ್ಲ ಯಾಕೆ ಪಕ್ಷ ಬಿಟ್ಟೆವು? ಇದನ್ನೆಲ್ಲ ತಿಳಿಯಲು ಕುಮಾರಸ್ವಾಮಿ ರಾತ್ರಿ 10 ಗಂಟೆ ಬಳಿಕ ಕಣ್ಣುಮುಚ್ಚಿ ಮಲಗಿ ಯೋಚಸಲಿ. ಕುಮಾರಸ್ವಾಮಿ ಅವರಿಗೆ ಎಲ್ಲವೂ ಗೊತ್ತಿದೆ. ಅದರೂ ಒಮ್ಮೆ ಕಣ್ಣುಮುಚ್ಚಿ ಯೋಚನೆ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ