Breaking News

ವೈದ್ಯರ ಬದಲಿಗೆ ನರ್ಸ್​​​​ಗಳಿಂದ ಗರ್ಭಿಣಿ ಹೆರಿಗೆ; ನವಜಾತ ಗಂಡು ಮಗು ಸಾವು

Spread the love

ಬೆಂಗಳೂರು: ಗರ್ಭಿಣಿಗೆ ಡಾಕ್ಟರ್ ಬದಲು ನರ್ಸ್​ಗಳು ಹೆರಿಗೆ ಮಾಡಿಸಿದ್ದರಿಂದ ನವಜಾತ ಗಂಡು ಮಗು ಸಾವನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಿರುದ್ಧ ಹೀಗೊಂದು ಆರೋಪ ಖುದ್ದು ಮಗು ಕಳೆದುಕೊಂಡ ತಾಯಿ ಪವಿತ್ರ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಪಲ್ಲವಿ, ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚೆಕಪ್ ಮಾಡಿಸುತ್ತಿದ್ದರು. ಇನ್ನು ನಿನ್ನೆ ರಾತ್ರಿ 10.30ಕ್ಕೆ ಪವಿತ್ರಗೆ ಹೆರಿಗೆ ನೋವು ಕಾಣಿಸಿಕೊಂಡ ಈ ಹಿನ್ನೆಲೆ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಗರ್ಭಿಣಿಗೆ ಬೆಳಗಿನ ಜಾವ 4 ರಿಂದ 4.30 ರ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಆಗ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ನರ್ಸ್​ಗಳೇ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗುವಿನ ತಲೆ ಹೊರಬಂದು ಕಟ್ ಆಗಿ ಮಗು ಸಾವನ್ನಪ್ಪಿದೆ. ಆದ್ದರಿಂದ ವೈದ್ಯರು ಹೆರಿಗೆ ಮಾಡಿಸಿದ್ರೆ ಮಗು ಉಳಿಯುತ್ತಿತ್ತು. ನರ್ಸ್​ಗಳು ಹೆರಿಗೆ ಮಾಡಿಸಿದ್ದರಿಂದಲೇ ಮಗು ಸಾವನ್ನಪ್ಪಿದೆ ಅಂತಾ ಪವಿತ್ರ ಹಾಗೂ ಕುಟುಂಬಸ್ಥರು ಗಂಭೀರ ಆರೋಪ ಎಸಗಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ