Breaking News

ತಾಲಿಬಾನ್ ಸಮಸ್ಯೆಯಿಂದ ಅನಿಲ ಬೆಲೆ ಏರಿಕೆಯಾಗಿದೆ :ಅರವಿಂದ್ ಬೆಲ್ಲದ್

Spread the love

ಧಾರವಾಡ: ತಾಲಿಬಾನ್ ಸಮಸ್ಯೆಯಿಂದ ಅನಿಲ ಬೆಲೆ ಏರಿಕೆಯಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ. 

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಸಮಸ್ಯೆಯಿಂದಾಗಿ ಬೆಲೆ ಏರಿಕೆಯಾಗಿವೆ. ಅಲ್ಲದೇ ಕಚ್ಚಾ ತೈಲ ಬರುತ್ತಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಮತ್ತು ಗ್ಯಾಸ್ ದರ ಹೆಚ್ಚಳ ಯಾಕೆ ಆಗಿದೆ ಎಂದು ಮತದಾರರೇ ವಿಚಾರ ಮಾಡಿ ಮತ ಹಾಕುತ್ತಾರೆ ಎಂದು ನುಡಿದಿದ್ದಾರೆ. 

ಇದೇ ವೇಳೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಮತ್ತೆ ನಾವೇ ಗೆಲ್ಲಲಿದ್ದೇವೆ. ಜನ ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಹೀಗಾಗಿ ನಾವು ಪಾಲಿಕೆ ಚುನಾವಣೆಯಲ್ಲಿ 55 ರಿಂದ 60 ಸೀಟು ಗೆಲ್ಲುತ್ತೇವೆ. ಈ ಬಾರಿ ಪಾಲಿಕೆಯಲ್ಲಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ