Breaking News

ಒಟ್ಟಾಗಿ ಊಟಕ್ಕೆ ಕುಳಿತಾಗಲೇ ಬಿತ್ತು ಸೀಲಿಂಗ್ ಫ್ಯಾನ್

Spread the love

ರಾತ್ರಿ ವೇಳೆ ಮಕ್ಕಳೊಂದಿಗೆ ತಂದೆ-ತಾಯಿ ನೆಮ್ಮದಿಯಾಗಿ ಕುಳಿತು ಊಟ ಮಾಡುತ್ತಿದ್ದಾರೆ. ಇದ್ದಕಿದ್ದಂತೆ ಸೀಲಿಂಗ್ ಫ್ಯಾನ್ ಅವರ ಮೇಲೆಯೇ ಕೆಳಕ್ಕೆ ಬಿದ್ದಿದೆ. ಇಂಥ ದೃಶ್ಯ ನೆನೆಸಿಕೊಂಡರೇ ಮೈಬೆವರುತ್ತದೆ.

ಆದರೆ, ವಿಯೆಟ್ನಾಂನಲ್ಲಿ ಈ ಘಟನೆ ಜರುಗಿದೆ. ಮನೆಯ ಒಳಗಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಅದೃಷ್ಟವಶಾತ್ ಸೀಲಿಂಗ್ ಫ್ಯಾನ್ ಬ್ಲೇಡ್‍ಗಳು, ಊಟಕ್ಕೆ ಕುಳಿತಿದ್ದ ಮಕ್ಕಳ ತಲೆಯ ಮೇಲೆ ಬಿದ್ದಿಲ್ಲ. ಮಧ್ಯದ ಮೋಟಾರ್ ಭಾಗ ಕೂಡ ಯಾರ ತಲೆಗೂ ಬಡಿದಿಲ್ಲ.

ಒಟ್ಟು ಆರು ಮಂದಿ ಊಟ ಮಾಡುವಾಗ ಈ ದುರಂತ ನಡೆದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೊ ವೈರಲ್ ಆಗಿದ್ದು, ‘ದೇವರು ಕಾಯುತ್ತಿರುತ್ತಾನೆ’ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಭಗವಂತನನ್ನು ನೆಟ್ಟಿಗರು ಸ್ಮರಿಸಿದ್ದಾರೆ.

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ