Breaking News
Home / ರಾಜಕೀಯ / ರಾಹುಲ್ ಇನ್ ಸ್ಟಾಗ್ರಾಂ ಖಾತೆಯೂ ಬ್ಲಾಕ್..? ಕ್ರಮ ಕೈಗೊಳ್ಳುವಂತೆ ಫೇಸ್ ಬುಕ್ ಗೆ NCPCR ಪತ್ರ

ರಾಹುಲ್ ಇನ್ ಸ್ಟಾಗ್ರಾಂ ಖಾತೆಯೂ ಬ್ಲಾಕ್..? ಕ್ರಮ ಕೈಗೊಳ್ಳುವಂತೆ ಫೇಸ್ ಬುಕ್ ಗೆ NCPCR ಪತ್ರ

Spread the love

ನವ ದೆಹಲಿ : ಟ್ವೀಟರ್ ಖಾತೆಯ ಬ್ಲಾಕ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಿಗೆ, ನ್ಯಾಶನಲ್ ಕಮಿಷನ್ ಫಾರ್ ಪ್ರೊಟೆಕ್ಶನ್ ಆಫ್ ಚೈಲ್ಡ್ ರೈಟ್ಸ್ (ಎನ್ ಸಿ ಪಿ ಸಿ ಆರ್) ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿ ಅವರ ಿನ್ ಸ್ಟಾಗ್ರಾಂ ಖಾತೆಯನ್ನು ಬ್ಲಾಕ್ ಮಾಡುವಂತೆ ಒತ್ತಾಯಿಸಿದೆ.

ಆಗಸ್ಟ್ 4 ರಂದು ಎನ್ ಸಿ ಪಿ ಸಿ ಆರ್, ದೆಹಲಿಯ ದಲಿತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿ ಅವರೊಂದಿಗಿನ ಫೋಟೋವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗ ಪಡಿಸಿದ್ದಾರೆಂದು ಆರೋಪಿಸಿ ಟ್ವೀಟರ್ ಇಂಡಿಯಾ ಸಂಸ್ಥೆಗೆ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಬ್ಲಾಕ್ ಮಾಡುವಂತೆ ಕೋರಿ ಪತ್ರ ಬರೆದಿತ್ತು.

ಈಗ ಎನ್ ಸಿ ಪಿ ಸಿ ಆರ್, ಫೇಸ್ ಬುಕ್ ಇಂಡಿಯಾ ಗೆ ಪತ್ರ ಬರೆದಿದೆ, ರಾಹುಲ್ ಗಾಂಧಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿರುವ ವಿಡೀಯೋವೊಂದನ್ನು ಹಂಚಿಕೊಂಡಿದ್ದಾರೆ. ಆವೀಡಿಯೋದಲ್ಲಿ ಸಂತ್ರಸ್ತೆಯ ತಂದೆ ಹಾಗೂ ತಾಯಿ ಮುಖ ಪರಿಚಯ ಆಗುವ ಹಾಗೆ ಇದೆ. ಈ ವೀಡಿಯೋದ ಮೂಲಕ ಸಂತ್ರಸ್ತೆ ಬಾಲಕಿಯ ಗುರುತನ್ನು ರಾಹುಲ್ ಗಾಂಧಿ ಬಹಿರಂಗ ಪಡಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ಬಾಲ ನ್ಯಾಯ ಕಾಯ್ದೆ, 2015, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012, ಮತ್ತು ಭಾರತೀಯ ದಂಡ ಸಂಹಿತೆಯ ನಿಯಮಗಳ ಉಲ್ಲಂಘನೆಯ ಕುರಿತು ಗಾಂಧಿಯವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್ ಸಿ ಪಿ ಸಿ ಆರ್ ಫೇಸ್‌ಬುಕ್‌ ಇಂಡಿಯಾಗೆ ಪತ್ರದ ಮೂಲಕ ಸೂಚಿಸಿದೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ