ನವದೆಹಲಿ : ಕೇಂದ್ರ ಸರ್ಕಾರವು ರಾಝ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಕೋವಿಡ್ ಲಸಿಕೆ 2 ಡೋಸ್ ಪಡೆದ ಪ್ರವಾಸಿಗರಿಗೆ ಆರ್ ಟಿಪಿ-ಸಿಆರ್ ವರದಿ ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದೆ.
ಪ್ರವಾಸಿಗರಿಗೆ ಆರ್ ಟಿಪಿಸಿಆರ್ ವರದಿ ಕಡ್ಡಾಯಮಾಡಬಾರದು ಎಂದು ರಾಜ್ಯ ಸರಕಾರಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಭಾರತೀಯ ಪ್ರವಾಸೋದ್ಯಮ ಹಾಗೂ ಆತಿಥ್ಯ ಸಂಘಟನೆಗಳ ಒಕ್ಕೂಟದ ಜತೆ ಕೇಂದ್ರ ಪ್ರವಾಸೋದ್ಯಮ ಕಾರ್ಯದರ್ಶಿಗಳು ಆ.5ರಂದು ನಡೆದಿದ್ದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಪಶ್ಚಿಮಬಂಗಾಳ, ಕರ್ನಾಟಕ, ಗೋವಾ ಹಾಗೂ ಛತ್ತೀಸ್ ಗಡದಲ್ಲಿ ಲಸಿಕೆಯ ಎರಡೂ ಡೋಸ್ ಪಡೆದ ಪ್ರವಾಸಿಗರೂ ಆರ್ ಟಿಪಿಸಿಆರ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
Laxmi News 24×7