Breaking News

ಪದವಿ ಪರೀಕ್ಷೆಗೆ ಕಳೆದ ವರ್ಷದ ಪ್ರಶ್ನೆಪತ್ರಿಕೆ ಪೂರೈಸಿದ ಗುಲಬರ್ಗಾ ವಿಶ್ವವಿದ್ಯಾಲಯ!

Spread the love

ಲಿಂಗಸುಗೂರು: ಕಳೆದ ವರ್ಷದ ಪದವಿ ಪ್ರಶ್ನೆ ಪತ್ರಿಕೆ ಪೂರೈಸಿದ ಗುಲಬರ್ಗಾ ವಿವಿ ಅಧಿಕಾರಿಗಳ ಯಡವಟ್ಟಿನಿಂದ ವಿದ್ಯಾರ್ಥಿಗಳು ಒಂದು ತಾಸು ತಡವಾಗಿ ಪರೀಕ್ಷೆ ಬರೆದ ಘಟನೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಗುರುವಾರ ಪದವಿ ಪರೀಕ್ಷೆ ಆರಂಭವಾಗಿದ್ದು, ವಿವಿಧ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಲು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ನೋಡಲ್‌ ಕೇಂದ್ರವನ್ನಾಗಿ ಮಾಡಲಾಗಿದೆ. ಗುರುವಾರ ಬಿಎ ಮೂರನೇ ಸೆಮಿಸ್ಟರ್‌ನ ಇತಿಹಾಸ ವಿಷಯ ಪರೀಕ್ಷೆ ನಡೆದಿದ್ದು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ತಪ್ಪಾಗಿ ವಿತರಿಸಲಾಗಿತ್ತು. ವಿಷಯ ಗಮನಕ್ಕೆ ಬಂದ ಕೂಡಲೇ ಪ್ರಶ್ನೆಪತ್ರಿಕೆಗಳನ್ನು ವಾಪಸ್‌ ಪಡೆಯಲಾಗಿದೆ.

ಕೂಡಲೇ ಪ್ರಾಚಾರ್ಯ ಡಾ| ಮಹಾಂತಗೌಡ ಪಾಟೀಲ್‌ ಅವರು ಗುಲಬರ್ಗಾ ವಿವಿ ರಿಜಿಸ್ಟ್ರಾರ್‌ಗೆ ಕರೆ ಮಾಡಿ ಕಳೆದ ವರ್ಷದ ಪ್ರಶ್ನೆ ಪತ್ರಿಕೆ ಪೂರೈಸಿರುವ ಬಗ್ಗೆ ತಿಳಿಸಿದರು. ಅನಂತರ ವಿವಿ ರಿಜಿಸ್ಟ್ರಾರ್‌ ಅವರು ಇ-ಮೇಲ್‌ ಮೂಲಕ ಈ ಸಾಲಿನ ಪ್ರಶ್ನೆಪತ್ರಿಕೆಯನ್ನು ಕಳುಹಿಸಿದ್ದು, ಅದರ ಪ್ರಿಂಟ್‌ ತೆಗೆದು 390 ವಿದ್ಯಾರ್ಥಿಗಳಿಗೆ ನೀಡಲಾಯಿತು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ