ಜಾಮೀನು ಸಿಕ್ಕರೂ ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್
Laxminews 24x7
ಡಿಸೆಂಬರ್ 14, 2024
ರಾಜಕೀಯ, ರಾಜ್ಯ
102 Views
ಸಂಧ್ಯಾ ಥಿಯೇಟರ್‌ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ನಂತರ ಅವರು ಬಿಡುಗಡೆಯಾಗಿದ್ದಾರೆ.
ಈ ಘಟನೆಯಿಂದ ಟಾಲಿವುಡ್‌ನಲ್ಲಿ ಆಕ್ರೋಶ ಹಾಗೂ ಚರ್ಚೆಗಳು ಹೆಚ್ಚಿವೆ. ಅಲ್ಲು ಅರ್ಜುನ್ ಅವರ ಬಂಧನವು ಅಭಿಮಾನಿಗಳಲ್ಲಿ ಕೋಪವನ್ನು ಹುಟ್ಟುಹಾಕಿದೆ.ಹೈದರಾಬಾದ್ನ ಸಂಧ್ಯಾ ಥಿಯೇಟರ್‌ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ (ಡಿಸೆಂಬರ್ 13) ಬಂಧನ ಮಾಡಲಾಯಿತು.
ಈ ಬಂಧನದಿಂದ ಇಡೀ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿ ಆಗಿದೆ. ಕೆಳ ಹಂತದ ಕೋರ್ಟ್ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಕೋರ್ಟ್ ಪ್ರತಿ ಜೈಲು ಸೇರದ ಹಿನ್ನೆಲೆಯಲ್ಲಿ ಅವರ ಬಿಡುಗಡೆ ತಡವಾಗಿದೆ. ಬನ್ನಿ ರಾತ್ರಿಯಿಡೀ ಜೈಲಿನಲ್ಲೇ ಕಳೆದಿದ್ದಾರೆ. ಮುಂಜಾನೆ ಅವರು ಬಿಡುಗಡೆ ಹೊಂದಿದ್ದಾರೆ.