ಹಾಸನ : ಮೇ ಅಂತ್ಯಕ್ಕೆ ಕೊರೊನಾ ಮಹಾಮಾರಿ ಕೊನೆಯಾಲಿದೆ , ಪ್ರಕೃತಿ ಜೊತೆ ಜನ ಸಹಕರಿಸಿದರೆ ವ್ಯಾಧಿ ಶೀಘ್ರ ದೂರವಾಗಲಿದೆ, ಭಾರತಕ್ಕಿಲ್ಲ ಮಹಾಮಾರಿಯ ಗಂಡಾಂತರ ಎಂದು ಕೋಡಿ ಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಬಹಳ ಎಚ್ಚರದಿಂದ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಶ್ರೀಗಳ ಮನವಿ ಮಾಡಿದ್ದಾರೆ . ‘ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ನುಡಿಯೆ ಪುರವೆಲ್ಲಾ ಕೂಳಾದೀತು’ ಎಂದು , ಅಮೆರಿಕಾಗೆ ಇನ್ನೂ ಭಾರಿ ಗಂಡಾಂತರ ಇದೆ ಎಂದ ಶ್ರೀಗಳು ತಿಳಿಸಿದ್ದಾರೆ.
ಸಿರಿವಂತ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ, ಯುದ್ದವಿಲ್ಲದೆ ಜನರು ಮಡಿಯುತ್ತಾರೆ ಎಂದು ಕಾಲ ಜ್ಞಾನ ಭವಿಷ್ಯ ನುಡಿದ ಶ್ರೀಗಳು ಅಮೆರಿಕಾಗೆ ಇನ್ನು ತೀವ್ರ ಗಂಡಾಂತರ ಇದೆ ಎಂದು ಭವಿಷ್ಯ ನುಡಿದ್ದಾರೆ.
ಈ ರೋಗ ಲೋಕ ಪೀಡಕ,ಜಗತ್ತಿಗೆ ಬಂದಿರೊ ಕಾಯಿಲೆ ಶೀತ ಪ್ರದೇಶಕ್ಕೆ ಹೆಚ್ಚು ಹಾನಿಮಾಡುತ್ತದೆ. ಭಾರತದಲ್ಲಿ ದೊಡ್ಟಮಟ್ಟದ ಸಾವು ನೋವು ಆಗುವುದಿಲ್ಲ, ಕರ್ನಾಟಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ, ಜನರ ಬೇಜವಾಬ್ದಾರಿ ಯಿಂದ ಕೆಲ ಸಮಸ್ಯೆ ಆಗುತ್ತಿದೆ.
ಜನರು ಸರ್ಕಾರ, ಹಾಗು ವೈದ್ಯರ ಸಲಹೆ ಪಾಲಿಸಬೇಕು. ಕೋರೊನಾದಿಂದ ನಾಡ ಅರಸನಿಗೆ ಕಂಟಕ ಇಲ್ಲ,
ಜನರಿಗೆ ಕೆಲ ಸಚಿವರಿಗೆ ಕಂಟಕ ಇದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದ್ದಾರೆ.