Breaking News
Home / ಜಿಲ್ಲೆ / ಮಹಾರಾಷ್ಟ್ರದ ಗಡಿಯಲ್ಲಿಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ನಿನ್ನೆ ರಾತ್ರಿಯಿಂದ ನಿಲ್ಲಿಸಲಾಗಿದೆ

ಮಹಾರಾಷ್ಟ್ರದ ಗಡಿಯಲ್ಲಿಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ನಿನ್ನೆ ರಾತ್ರಿಯಿಂದ ನಿಲ್ಲಿಸಲಾಗಿದೆ

Spread the love

ಬೆಳಗಾವಿ: ನಿನ್ನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ‘ಹುತಾತ್ಮಾ ದಿನ’ದ ಕಾಯ೯ಕ್ರಮದಲ್ಲಿ ಭಾಗವಹಿಸಿಲು ಆಗಮಿಸಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ ಬಳಿಕ, ಮಹಾರಾಷ್ಟ್ರದ ಗಡಿಯಲ್ಲಿ, ವಿಶೇಷವಾಗಿ ಕೊಲ್ಲಾಪುರ ಜಿಲ್ಲೆಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ನಿನ್ನೆ ರಾತ್ರಿಯಿಂದ ನಿಲ್ಲಿಸಲಾಗಿದೆ.

     

ಸಚಿವ ರಾಜೇಂದ್ರ ಪಾಟೀಲ ಪೊಲೀಸರ ಕಣ್ಣು ತಪ್ಪಿಸಲು, ಕಾಗಲನಿಂದ ಸಾಮಾನ್ಯರಂತೆ ಬಸ್ ಮೂಲಕ ಬೆಳಗಾವಿ ತಲುಪಿ ಬಳಿಕ ಖಾಸಗಿ ಕಾರಿನಿಂದ ಬೆಳಗಾವಿ ನಗರದ ಹುತಾತ್ಮಾ ವೃತ್ತಕ್ಕೆ ಆಗಮಿಸಿದ್ದರು. ಅಷ್ಟೊತ್ತಿಗೆ ಪೊಲೀಸರಿಗೆ ಮಾಹಿತಿ ಗೊತ್ತಾಗಿ, ಅವರನ್ನು ಅಲ್ಲಿಯೇ ವಶಕ್ಕೆ ಪಡೆದಿದ್ದರು. ಗಡಿಹೋರಾಟದಲ್ಲಿ ಮೃತಪಟ್ಟ ಹುತಾತ್ಮರಿಗೆ ಶೃದ್ಧಾಂಜಲಿ ಸಲ್ಲಿಸಲು ಸಚಿವರಿಗೆ ಪೊಲೀಸರು ಅವಕಾಶ ನೀಡದ ಕಾರಣ, ಶಿವಸೇನೆ ಕಾಯ೯ಕತ೯ರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು.

ಈ ಘಟನೆಯ ಫಲಶೃತಿ ಕೊಲ್ಲಾಪುರ ಜಿಲ್ಲೆಯಲ್ಲಿ ನಿನ್ನೆಯಿಂದ ಗೋಚರಿಸುತ್ತಿದೆ. ನಿನ್ನೆ ಶಿವಸೇನೆ ಕಾಯ೯ಕತ೯ರು ಇಚಲಕರಂಜಿ ಮತ್ತು ಕೊಲ್ಲಾಪುರದಲ್ಲಿ ವಾಹನಗಳನ್ನು ತಡೆದು ಪ್ರತಿಭಟನಾ ರ್ಯಾಲಿ ನಡೆಸಿದ್ದು, ಅಲ್ಲಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಸಚಿವ ರಾಜೇಂದ್ರ ಪಾಟೀಲ ಬೆಂಬಲಿಗರು ಕನಾ೯ಟಕ ಸಕಾ೯ರದ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ನಡೆವೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಕನಾ೯ಟಕ ನವನಿಮಾ೯ಣ ಸೇನೆ ಅಧ್ಯಕ್ಷ ಭೀಮಾ ಶಂಕರ ಪಾಟೀಲ ನೀಡಿದ ಎಂಇಎಸ್ ವಿರುದ್ಧದ ಹೇಳಿಕೆಯನ್ನು ಖಂಡಿಸಿ, ಶಿವಸೇನೆ ಕಾಯ೯ಕತ೯ರು ಕೊಲ್ಲಾಪುರದಲ್ಲಿ ಕನ್ನಡದ ಬಾವುಟ ಮತ್ತು ಬಿ.ಎಸ್.ಯಡಿಯೂರಪ್ಪ ಪ್ರತಿಕೃತಿ ದಹಿಸಿದ್ದರು. ಆಗ ಕೂಡ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಮೂರು ವಾರಗಳಲ್ಲಿ ಇದು ಎರಡನೆಯ ಬಾರಿಗೆ ಬಸ್ ಸಂಚಾರ ವ್ಯತ್ಯಯವಾಗಿದೆ

Advertisement


Spread the love

About Laxminews 24x7

Check Also

ಚುನಾವಣೆ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ: ವಿಚಾರಣೆ ಏ.20ಕ್ಕೆ ಮುಂದೂಡಿಕೆ

Spread the loveಶಿವಮೊಗ್ಗ: ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ