ಜೂನಿಯರ್ ಸಂತೋಷ ಜಾರಕಿಹೊಳಿ ಆಗಮನದಿಂದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಂತೋಷದ ಕಾಣಿಕೆ..!!
ಜಲಸಂಪನ್ಮೂಲ ಸಚಿವ ಹಾಗೂ ಗೋಕಾಕ ಕ್ಷೇತ್ರದ ಶಾಸಕರಾದ ರಮೇಶ ಜಾರಕಹೊಳಿ ಅವರ ಪುತ್ರರಾದ ಸಂತೋಷ ಜಾರಕಿಹೊಳಿ ಅವರು ಗಂಡು ಮಗುವಿಗೆ ತಂದೆಯಾಗಿದ್ದರು.ಅವರ ಕುಟುಂಬದಲ್ಲಿ ಜ್ಯೂನಿಯರ್ ಆಗಮಿಸಿದಕ್ಕಾಗಿ ಸಂತೋಷದ ವಾತಾವರಣ ನಿರ್ಮಾಣವಾಯಿತು.ಇನ್ನು ಸಂತೋಷ ಹಾಗೂ ಅಂಭಿಕಾ ದಂಪತಿ ಕೂಡ ತಮ್ಮ ಮುದ್ದು ಮಗುವಿನ ಆಗಮನದಿಂದ ಬಹಳ ಖುಸಿಯಲ್ಲಿ ತೆಲಾಡಿದ್ದರು.ಈ ಶುಭ ಗಳಿಗೆಯಿಂದ ಅವರು ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಬಟ್ಟೆಗಳನ್ನು ನೀಡಿ ಗೌರವಿಸಿದರು.ಇನ್ನು ಜ್ಯೂನಿಯರ್ ಸಂತೋಷ ಅವರ ಜನನ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿತ್ತು.ತಮ್ಮ ಜೀವನದಲ್ಲಿ ಸರಳತೆಗೆ ಆದ್ಯತೆ ನೀಡುವ ಸಂತೋಷ ಜಾರಕಿಹೊಳಿ ಅವರು ತಮ್ಮ ಪತ್ನಿ ಅಂಭಿಕಾ ಅವರು ಗರ್ಭಿಣಿಯಾಗಿದ್ದಾಗ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರಿಂದ ವೈದ್ಯಕೀಯ ಉಪಚಾರ ಪಡೆದುಕೊಂಡಿದ್ದರು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಕೂಡ ಆಗಬೇಕೆಂದು ಬಯಸಿದ್ದರು.ಅವರ ಇಚ್ಚೆಯಂತೆ ಅವರ ಮಗನು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ್ದನು.ಇದರಿಂದ ಉತ್ತಮ ಸಂದೇಶ ರವಾನೆ ಆಗಿತ್ತು.ಈ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಬಟ್ಟೆಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ: ಮಹೇಶ ಕೋಣಿ, ಪ್ರಶಾಂತ ಜೋರಾಪುರ, ಮಹಾನಿಂಗ ಕೆಂಚನ್ನವರ, ಸಚಿನ್ ಕಲಾಲ, ಶೇಷಾಚಲ ಹೊನ್ನತ್ತಿ, ಮಂಜುನಾಥ ಮುರಗೋಡ ಉಪಸ್ಥಿತರಿದ್ದರು
