ಸೌಭಾಗ್ಯ ಶುಗರ್ ಫ್ಯಾಕ್ಟರಿ ವತಿಯಿಂದ ರೈತರಿಗೆ ಅಕ್ಕರೆಯ ಸನ್ಮಾನ..!!
ಬಾಕ್ಸ್: ಕಬ್ಬು ಪೊರೈಸಿದ ರೈತರಿಗೆ ಸನ್ಮಾನ್/ಸಂತೋಷ ಜಾರಕಿಹೊಳಿ ನೇತೃತ್ವದಲ್ಲಿ ಆಯೋಜನೆ/ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ ಅನ್ನದಾತರು.
ಸಂತೋಷ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಶುಗರ್ ಫ್ಯಾಕ್ಟರಿ ವತಿಯಿಂದ ಕಾರ್ಖಾನೆಗೆ ಕಬ್ಬು ಪೊರೈಸುತ್ತಿರುವ ರೈತರಿಗೆ ಇಂದು ಸನ್ಮಾನಿಸಿ ಗೌರವಿಸಲಾಯಿತು. ಈ ವರ್ಷದ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗೆ ಅವಶ್ಯಕತೆ ಇರುವಷ್ಟು ಕಬ್ಬುಗಳನ್ನು ರೈತರು ಪೊರೈಸಿದಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ಹರ್ಷ ವ್ಯಕ್ತ ಪಡಿಸಿದೆ.ಆದ್ದರಿಂದ ಇಂದು ಕಬ್ಬು ಪೊರೈಕೆಯ ಕೊನೆಯ ದಿನವಾಗಿದ್ದರಿಂದ ರೈತರಿಗೆ ಸನ್ಮಾನಿಸಿ ಗೌರವಿಸಿದರು.
ಸಕ್ಕರೆ ಫ್ಯಾಕ್ಟರಿಯ ಮಾಲೀಕರಾದ ಸಂತೋಷ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸಕ್ಕರೆ ಕಾರ್ಖಾನೆಯ ವತಿಯಿಂದ ಸನ್ಮಾನಿಸಿದಕ್ಕೆ ರೈತರು ಸಂತೋಷ ಜಾರಕಿಹೊಳಿ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.