Breaking News
Home / ಜಿಲ್ಲೆ / ಜನತಾ ಕರ್ಫ್ಯೂ ಗೆ ಬೆಂಬಲಿಸಿದ ರಮೇಶ್ ಜಾರಕಿಹೊಳಿ

ಜನತಾ ಕರ್ಫ್ಯೂ ಗೆ ಬೆಂಬಲಿಸಿದ ರಮೇಶ್ ಜಾರಕಿಹೊಳಿ

Spread the love

ಗೋಕಾಕ: ದೇಶಾದ್ಯಂತ ಕೊರೋನಾ ವೈರಸ್ ನ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಾಳೆ, ಮಾರ್ಚ್ 22ರ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸುವಂತೆ ಕರೆ ನೀಡಿದ್ದು, ಭಾರತದ ಒಬ್ಬ ಜಾಗೃತ ಪ್ರಜೆಯಾಗಿ, ಸಂಕಲ್ಪ ಹಾಗೂ ಸಂಯಯದಿಂದ ಈ ’ಜನತಾ ಕರ್ಫ್ಯೂ’ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾಳೆ ಸ್ವಯಂ ಪ್ರೇರಣೆಯಿಂದ ನಡೆಯಲಿರುವ ’ಜನತಾ ಕರ್ಫ್ಯೂ’ವನ್ನು ಬೆಂಬಲಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು‌ ಜನರಲ್ಲಿ ಮನವಿ ಮಾಡಿದ್ದಾರೆ.

ಶನಿವಾರದರಂದು ನಗರದ ಸಚಿವರ ಕಾರ್ಯಾಲಯದ ಮುಂದೆ ತಾಲೂಕಾ ಆಡಳಿತ, ಸಾರ್ವಜನಿಕ ಆಸ್ಪತ್ರೆ, ನಗರಸಭೆ, ಪೊಲೀಸ ಇಲಾಖೆ, ರೋಟರಿ ಸಂಸ್ಥೆ , ಇನ್ನರವ್ಹೀಲ ಸಂಸ್ಥೆ ಹಾಗೂ ರೋಟರಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೊರೋನ ಸೋಂಕು ಕುರಿತು ಜಾಗೃತ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದಿಗ್ಧ ಪರಿಸ್ಥಿತಿಯನ್ನು ಎಲ್ಲರೂ ಒಟ್ಟಾಗಿ, ಧೈರ್ಯದಿಂದ ಎದುರಿಸೋಣ ಮತ್ತು ಭಾರತವನ್ನು ಕೊರೋನಾ ಮುಕ್ತ ರಾಷ್ಟ್ರವಾಗಿ ಮಾಡೋಣ ಎಂದು‌ ತಿಳಿಸಿದ್ದಾರೆ.

ನಾವು ಸ್ವಸ್ಥರಾಗಿದ್ದರೆ, ರಾಷ್ಟ್ರವು ಸ್ವಸ್ಥವಾಗಲಿದೆ. ಕೊರೋನಾ ವೈರಸ್ ತಡೆಗೆ ಆಂತರಿಕ ಸಮುದಾಯ ಹರಡುವಿಕೆಯಿಂದ ಅದನ್ನು ತಡೆಗಟ್ಟುವುದು ನಮ್ಮ ಕರ್ತವ್ಯ. ಈ ಹಂತದಲ್ಲಿ ‘ಸಾಮಾಜಿಕ ಅಂತರ ‘ ತುಂಬಾ ಪ್ರಾಮುಖ್ಯ. ಆದ್ದರಿಂದ ಜನತಾ ಕರ್ಫ್ಯೂ ಬೆಂಬಲಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

ಜಾಥಾದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ , ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ಡಾ.ರವೀಂದ್ರ ಆಂಟಿನ್, ಡಾ.ಆರ್‌.ಎಸ್.ಬೆನಚನಮರಡಿ, ಡಿಎಸಪಿ ಡಿ.ಟಿ.ಪ್ರಭು , ಸಿ.ಪಿ.ಐ ಗೋಪಾಲ ರಾಠೋಡ, ಡಾ.ಬಿ.ಎಸ್.ಮದಬಾಂವಿ , ರೋಟರಿ ಅಧ್ಯಕ್ಷ ಸೋಮಶೇಖರ್ ಮಗದುಮ್ಮ, ಡಾ‌.ಉದಯ ಆಜರೆ ಸೇರಿದಂತೆ ಅನೇಕರು ಇದ್ದರು


Spread the love

About Laxminews 24x7

Check Also

ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.

Spread the loveಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ