Breaking News

ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ ಮಾತಾಜಿ!

Spread the love

ಚಿಕ್ಕಮಗಳೂರು: ಬೆಂಗಳೂರಿನ  ನೆಲಮಂಗಲ ಮೂಲದ ಗೀತಾ ಮಾತಾಜಿಯವರು  ಕಳೆದ ನಾಲ್ಕು ವರ್ಷಗಳಿಂದ ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡು ದೇಶ-ಧರ್ಮಕ್ಕೆ ಒಳಿತಾಗಲೆಂದು 40 ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದಾರೆ.

ಗೀತಾ ಮಾತಾಜಿಯವರ ಈ ಅಪರೂಪದ ಭಕ್ತಿ ಪಯಣಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ  ತಾಲೂಕಿನ ಕೊಟ್ಟಿಗೆಹಾರದ ಜನ ಕೂಡ ಕೈ ಮುಗಿದು ಅಭಿನಂದನೆ ಸಲ್ಲಿಸಿದ್ದಾರೆ. ಗೀತಾ ಮಾತಾಜಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅಪರೂಪದ ಧಾರ್ಮಿಕ ವ್ರತವನ್ನು ಮುಂದುವರಿಸಿದ್ದಾರೆ. ಈ ಹಿಂದೆ ಕಾಶಿ, ತಿರುಪತಿ ಸೇರಿದಂತೆ ಹಲವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದರು.

ಈ ವರ್ಷವೂ ತಮ್ಮ ಭಕ್ತಿಯ ಪಯಣವನ್ನು ಶೃಂಗೇರಿ, ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನದತ್ತ ಮುಂದುವರಿಸಿದ್ದಾರೆ. ಈ ಬಾರಿಯ ಪಾದಯಾತ್ರೆಯಲ್ಲಿ ಗೀತಾ ಮಾತಾಜಿ ಅವರೊಂದಿಗೆ ಆಕರ್ಷಿತವಾದ ಬಾಲಕೃಷ್ಣ ಭಕ್ತರ ಗಮನ ಸೆಳೆಯುತ್ತಿದೆ. ಕಿರೀಟ, ಆಭರಣಗಳು, ಆಕರ್ಷಕ ಹೂವಿನ ಹಾರಗಳು ಹಾಗೂ ಸಾಂಪ್ರದಾಯಿಕ ವಸ್ತ್ರಗಳಿಂದ ಕಂಗೊಳಿಸುವ ಪುಟ್ಟ ಬಾಲಕೃಷ್ಣನನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಿರುವುದು ದಾರಿಯುದ್ದಕ್ಕೂ ಜನರ ಕಣ್ಮನ ಸೆಳೆಯುತ್ತಿದೆ.

ಹೆಜ್ಜೆ ಹೆಜ್ಜೆಯಲ್ಲೂ ಭಕ್ತಿ, ಜೊತೆಯಲ್ಲಿ ಬಾಲಕೃಷ್ಣ ಎಂಬಂತೆ ಸಾಗುತ್ತಿರುವ ಇವರ ಧಾರ್ಮಿಕ ಶ್ರದ್ಧೆ ಹಾಗೂ ಅಚಲ ನಂಬಿಕೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊಟ್ಟಿಗೆಹಾರ. ಚಾರ್ಮಾಡಿ ಘಾಟ್ ಮೂಲಕ ಹಾದುಹೋದ ಇವರಿಗೆ ಸ್ಥಳೀಯ ಜನತೆ ಅಪಾರ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.

ತಮ್ಮ ಲಗೇಜ್ ಇಟ್ಟುಕೊಳ್ಳಲು ಸೈಕಲ್ ಇಟ್ಟುಕೊಂಡಿರುವ ಮಾತಾಜಿಯವರು ಸೈಕಲ್‌ನಲ್ಲಿ ಹೋಗಬಹುದಾದರೂ, ಪಾದಯಾತ್ರೆಯ ಸಲುವಾಗಿ ಸೈಕಲ್‌ನ್ನು ತಳ್ಳಿಕೊಂಡೇ ಹೋಗುತ್ತಿದ್ದಾರೆ.


Spread the love

About Laxminews 24x7

Check Also

ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ: ಛಲವಾದಿ

Spread the loveಬೆಂಗಳೂರು: ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಂದು ಬಿಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ