Breaking News

ವೀಸಾ ಅವಧಿ ಮುಗಿದು 7 ತಿಂಗಳಾದರೂ ಅಕ್ರಮ ವಾಸ; ಇಸ್ರೇಲಿ ಪ್ರಜೆಯನ್ನ ವಶಕ್ಕೆ ಪಡೆದ ಹೊನ್ನಾವರ ಪೊಲೀಸರು

Spread the love

ಕಾರವಾರ: ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದಡಿ ಇಸ್ರೇಲ್ ಪ್ರಜೆಯನ್ನ ಉತ್ತರ ಕನ್ನಡ  ಜಿಲ್ಲೆಯ ಹೊನ್ನಾವರ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಸ್ರೇಲ್‌ನ ಮಾರ್ಚಾವಿ ಅಸ್ಸಾಪ್ ಎಂಬ ವಿದೇಶಿ ಪ್ರಜೆಯನ್ನು ಹೊನ್ನಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಸ್ಸಾಪ್ ಅವರ ವೀಸಾ ಅವಧಿ 2025ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು ಆದರೂ ತನ್ನ ಗುರುತನ್ನ ಹೇಳದೇ ಅಕ್ರಮವಾಗಿ ದೇಶದಲ್ಲಿ ಸುತ್ತಾಡುತಿದ್ದ.

ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಉಳಿದುಕೊಂಡಿದ್ದು ಗೋಕರ್ಣದಿಂದ ಮುರುಡೇಶ್ವರದತ್ತ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿದೇಶಿ ಪ್ರಜೆಯನ್ನು ಬೆಂಗಳೂರಿನ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ರವಾನೆ ಮಾಡಲಾಗಿದೆ.

ವೀಸಾ ಅವಧಿ ಮುಗಿದ ಬಳಿಕ ಭಾರತದಲ್ಲಿ ಉಳಿದುಕೊಂಡಿರುವ ಕುರಿತು ಮುಂದಿನ ಕಾನೂನು ಪ್ರಕ್ರಿಯೆಯನ್ನು FRRO ಅಧಿಕಾರಿಗಳು ಕೈಗೊಳ್ಳಲಿದ್ದಾರೆ


Spread the love

About Laxminews 24x7

Check Also

ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ

Spread the loveಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್  ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ