Breaking News

ನೈಸ್ ಟೋಲ್ ಸಂಗ್ರಹದಲ್ಲಿ ಅಕ್ರಮದ ಲೆಕ್ಕ: ಹೆಚ್‌ಡಿಕೆ ಗಂಭೀರ ಆರೋಪ

Spread the love

ಬೆಂಗಳೂರು: ನೈಸ್‌ ರಸ್ತೆಯ  ಕಲೆಕ್ಷನ್‌ನಲ್ಲಿ ನೈಸ್‌ ಕಂಪನಿ ವ್ಯಾಪಕ ಅಕ್ರಮಗಳನ್ನು ಎಸಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  ಆರೋಪಿಸಿದ್ದಾರೆ.

ಜೆಡಿಎಸ್ (JDS) ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೈಸ್ ಸಂಸ್ಥೆಯ ಪೂರ್ಣ ಹೂಡಿಕೆಗೆ ಹೋಲಿಸಿದರೆ ಸುಮಾರು 40% ಮೊತ್ತವನ್ನಷ್ಟೇ ಹೂಡಿಕೆ ಮಾಡಲಾಗಿದೆ. ವಾರ್ಷಿಕ ಸುಮಾರು 730 ಕೋಟಿ ರೂ. ಮೊತ್ತವನ್ನು ಟೋಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಸುಮಾರು 4,500 ಕೋಟಿ ರೂ. ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ನಿರ್ವಹಣಾ ವೆಚ್ಚವೂ ಸೇರಿದೆ ಎಂದು ಕೆಲವರು ಹೇಳುತ್ತಾರೆ ಆದರೆ ಒಪ್ಪಂದದ ಅವಧಿ 30 ವರ್ಷವಾಗಿದ್ದು, ನಿರ್ವಹಣೆಯೂ ಆ ಅವಧಿಯಲ್ಲಿ ನೈಸ್ ಕಂಪನಿಯ ಜವಾಬ್ದಾರಿ ಆಗಿರುತ್ತದೆ. ವರದಿ ಪ್ರಕಾರ ಆದಾಯವು ಹೂಡಿಕೆಯನ್ನು ಮೀರಿದೆ ಮತ್ತು ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.

ಫಾಸ್ಟ್‌ಟ್ಯಾಗ್ ಅಳವಡಿಸುವ ಮೊದಲು ವಾರ್ಷಿಕ ಟೋಲ್ ಆದಾಯವನ್ನು 60–70 ಕೋಟಿ ರೂ. ಎಂದು ಘೋಷಿಸಲಾಗುತ್ತಿತ್ತು. 2022ರಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಿದ ಬಳಿಕ ಆ ಮೊತ್ತವು ಸುಮಾರು 700 ಕೋಟಿ ರೂ. ಎಂದು ತೋರಿಸಲಾಗುತ್ತಿದೆ ಎಂದು ಈ ವರದಿ ಹೇಳುತ್ತದೆ. ಅಲ್ಲಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಮೊದಲು ಭಾರೀ ಪ್ರಮಾಣದ ಹಣ ಲೂಟಿಯಾಗಿದೆ ಎಂದೇ ಅರ್ಥ. ಈ ದೊಡ್ಡ ವ್ಯತ್ಯಾಸವು ಹಿಂದಿನ ಟೋಲ್ ಆದಾಯದ ಘೋಷಣೆ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಯೋಜನೆ ಒಳ್ಳೆಯದು, ದೇವೇಗೌಡರ ಕಾಲದಲ್ಲಿ ದೂರದೃಷ್ಟಿಯಿಂದ ಆರಂಭಿಸಿದ್ದು. ಮೈಸೂರುವರೆಗೆ ಕೆಲಸ ಮಾಡಲು ಯಾರು ತಡೆದರು. ಒಪ್ಪಂದ ಮತ್ತು ಆದೇಶಗಳನ್ನು ಉಲ್ಲಂಘಿಸಿದ್ದು ಸರ್ಕಾರವೇ ಎಂದು ಆರೋಪಿಸಿದರು. ವರದಿಯ ಪ್ರಕಾರ, ನೇಮಕಾತಿ ದಿನಾಂಕದಿಂದ ಎಂಟು ವರ್ಷಗಳ ಅವಧಿಯಲ್ಲಿ ಕ್ಲೋವರ್‌ ಲೀಫ್‌ನಿಂದ ಬಿಡದಿವರೆಗಿನ ಎಕ್ಸ್‌ಪ್ರೆಸ್‌ವೇ ಕಾಮಗಾರಿಯಲ್ಲಿ ಕೇವಲ 20% ಕೆಲಸ ಪೂರ್ಣಗೊಂಡಿದೆ. ಸರ್ಕಾರವೇ ನೇಮಿಸಿದ ಖಾಸಗಿ ಸಂಸ್ಥೆ ನೀಡಿರುವ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ವರದಿ ಇರುವಾಗ ಸುಳ್ಳು ಹೇಳಿ ಜನರನ್ನು ಎಷ್ಟು ದಿನ ತಪ್ಪುದಾರಿಗೆಳೆಯುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಈ ವಿಚಾರವನ್ನು ಮುಖ್ಯಮಂತ್ರಿ ಲಿಂಗಾಯತ ಸಮುದಾಯದ ವ್ಯಕ್ತಿಯೆಂಬ ಗುರುತಿನೊಂದಿಗೆ ಜೋಡಿಸಿ, ದೇವೇಗೌಡರು ಮತ್ತು ಕುಮಾರಸ್ವಾಮಿ ವಿರೋಧಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಪ್ರಸ್ತಾಪಿಸಿರುವುದನ್ನು ಕೇಂದ್ರ ಸಚಿವರು ಟೀಕಿಸಿದರು.

ಯೋಜನೆ ಜಾರಿಗೆ ಸಂಬಂಧಿಸಿ ಜಾತಿ ಪ್ರಶ್ನೆಗೆ ಸಂಬಂಧಿಸಿದ್ದಲ್ಲ. ಒಪ್ಪಂದ ಮತ್ತು ಯೋಜನೆಯ ವಿಷಯಕ್ಕೆ ಸಂಬಂಧಿಸಿ ನಾನು ಪ್ರಸ್ತಾಪ ಮಾಡಿದ್ದೇನೆ. ಆದರೆ ನೈಸ್ ಗುತ್ತಿಗೆದಾರ ಜಾತಿಯ ಹೆಸರನ್ನು ಕವಚವಾಗಿ ಬಳಸುತ್ತಿದ್ದಾನೆ ಎಂದು ಕಿಡಿಕಾರಿದರು. ನೈಸ್ ಗುತ್ತಿಗೆದಾರ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಅದಕ್ಕೆ ದೇವೇಗೌಡರು, ಕುಮಾರಸ್ವಾಮಿ ಸಹಿಸಲಿಲ್ಲ ಎಂದು ಮುಖ್ಯಮಂತ್ರಿ ಸೇರಿ ಕೆಲವರು ಹೇಳುತ್ತಿರುವುದು ಸರಿಯಲ್ಲ. ಅಕ್ರಮಗಳಿಗೂ ಜಾತಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ದೆಹಲಿ ಹೈಕೋರ್ಟ್‌ನಲ್ಲಿ ನೆಹಾ ಬೋರಾಗೆ ಹಿನ್ನಡೆ – 10,000 ರೂ. ಬಾಂಡ್‌ಗೆ ಸಹಿ ಹಾಕಿ ಶಾಂತಿ ಕಾಪಾಡುವಂತೆ ಸೂಚನೆ

Spread the loveನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ