Breaking News

ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇಳನ

Spread the love

ಬೆಳಗಾವಿ: ಕೌನ್ಸೆಲಿಂಗ್ ಸೆಲ್ ಮತ್ತು ಡಿಪಾರ್ಟ್‌ಮೆಂಟ್ ಆಫ್ ಸೈಕಾಲಜಿ ಹಾಗೂ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಆ್ಯಂಡ್ ರಿಸರ್ಚ್ (ಕಾಹೇರ್) ವತಿಯಿಂದ ಅಡ್ವಾನ್ಸಡ್ ಟೆಕ್ನಾಲಜಿ ಮತ್ತು ಥೆರಪಿಸ್-ಎ ಮಲ್ಟಿಡಿಸಿಪ್ಲಿನರಿ ಅಪ್ರೋಚ್ ಫಾರ್ ಮೆಂಟಲ್ ಹೆಲ್ತ್ ಮ್ಯಾನೇಜ್‌ಮೆಂಟ್ ಕುರಿತು 3ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಇಸ್ರೋದ ಎಸ್‌ಪಿಸಿಜಿ ಸಮೂಹ ನಿರ್ದೇಶಕ ಡಾ.ಶ್ರೀನಿವಾಸ ರಾವ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನಗಳ ಯುಗದಲ್ಲಿ ಮಾನಸಿಕ ಆರೋಗ್ಯದ ಕುರಿತು ಹಾಗೂ ಸಮುದಾಯದ ವಿವಿಧ ಗುಂಪುಗಳಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಮಹತ್ವದ ಕುರಿತು ವಿವರಿಸಿದರು.
ಕಾಹೇರ್ ರಿಜಿಸ್ಟ್ರಾರ್ ಡಾ.ವಿ.ಎಂ.ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೆಎನ್‌ಎಂಸಿ ಪ್ರಾಚಾರ್ಯ ಡಾ.ರಾಜೇಶ ಪೋವಾರ, ಸ್ಪೇನ್ ದೇಶದ ಆನೆಟ್ ಇತರರಿದ್ದರು.
ಕಾಹೇರ್‌ನ ವಿವಿಧ ಘಟಕಗಳ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು (ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ), 11 ದೇಶ ಹಾಗೂ ಭಾರತದ 15 ರಾಜ್ಯಗಳಿಂದ 225 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಯಾಸ್ಮಿನ್ ನದಾಫ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಹೇರ್ ಮನೋವಿಜ್ಞಾನ ವಿಭಾಗದ ಅಧ್ಯಾಪಕರು ಪ್ರಿಯಾ ವೈ ಶಿರಗುಪ್ಪಿ ವಂದಿಸಿದರು.

Spread the love

About Laxminews 24x7

Check Also

SIR ಬಗ್ಗೆ ಚುನಾವಣಾ ಆಯೋಗದಲ್ಲಿ ಭಿನ್ನಮತವಿಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದ ಕೂಡಿವೆ: ಆಯೋಗ ಸ್ಪಷ್ಟನೆ

Spread the loveನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ  ಬಗ್ಗೆ ಚುನಾವಣಾ ಆಯೋಗದಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ