Breaking News

 ಜಿಲ್ಲಯಲ್ಲಿ ಖಾಲಿ ಉಳಿದಿದ್ದ ಡಿಸಿಪಿ ಸ್ಥಾನಕ್ಕೆ ನೂತನ ಅಧಿಕಾರಿಗಳಾಗಿ ಐಪಿಎಸ್ ಪಿ. ಕೃಷ್ಣಕಾಂತ್ ನೇಮಕಗೊಂಡಿದ್ದಾರೆ.:ಹುಬ್ಬಳ್ಳಿ ಧಾರವಾಡ

Spread the love

ಹುಬ್ಬಳ್ಳಿ: ಜಿಲ್ಲಯಲ್ಲಿ ಖಾಲಿ ಉಳಿದಿದ್ದ ಡಿಸಿಪಿ ಸ್ಥಾನಕ್ಕೆ ನೂತನ ಅಧಿಕಾರಿಗಳಾಗಿ ಐಪಿಎಸ್ ಪಿ. ಕೃಷ್ಣಕಾಂತ್ ನೇಮಕಗೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿಗಳ ಮಧ್ಯೆ ನಡೆದ ಜಟಾಪಟಿ ಸಾಕಷ್ಟು ಸುದ್ದಿಯಾಗಿತ್ತು. ಪೊಲೀಸ್ ಆಯುಕ್ತರು ಹಾಗೂ ಕೆಳ ಸಿಬ್ಬಂದಿ ಮಧ್ಯೆ ನಡೆದ ಜಗಳದ ನಂತರ ಡಿಸಿಪಿ ನಾಗೇಶ್ ವರ್ಗಾವಣೆ ಸಹ ಆಗಿದ್ದರು. ನಾಗೇಶ್ ವರ್ಗಾವಣೆ ನಂತರ ಐಪಿಎಸ್ ಪಿ. ಕೃಷ್ಣಕಾಂತ್ ಅವರು ಖಾಲಿಯಾಗಿದ್ದ ಡಿಸಿಪಿ ಸ್ಥಾನದ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿ.ಐ.ಡಿ ಬೆಂಗಳೂರು ಘಟಕದಲ್ಲಿ ಪೊಲೀಸ್ ಅಧೀಕ್ಷಕರಾಗಿ ಕೃಷ್ಣಕಾಂತ್ ಅವರು ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಅಲ್ಲಿಂದ ಬೆಂಗಳೂರಿನ ಡಿ.ಜಿ ಮತ್ತು ಐ.ಜಿ.ಪಿ ಅವರು ಉಪ ಪೊಲೀಸ್ ಆಯುಕ್ತರು(ಕಾನೂನು ಮತ್ತು ಸುವ್ಯವಸ್ಥೆ) ಹುಬ್ಬಳ್ಳಿ-ಧಾರವಾಡ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ವರ್ಗಾವಣೆ ಮಾಡಿದ್ದಾರೆ.

ಹೀಗಾಗಿ ಕೃಷ್ಣಕಾಂತ್ ಅವರು ಹುಬ್ಬಳ್ಳಿ-ಧಾರವಾಡ ಉಪ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉಪ ಆಯುಕ್ತರಿಗೆ ಹೆಚ್ಚುವರಿ ಪ್ರಭಾರ ವಹಿಸಿ ಪೊಲೀಸ್ ಆಯುಕ್ತ ಆರ್. ದಿಲೀಪ್ ಸ್ವಾಗತಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ